ಪಡುಕುಡೂರು : ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶತಸ್ಮೃತಿ ರಂಗಮಂದಿರಕ್ಕೆ ಶುಕ್ರವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಪ್ರಮುಖ ಧಾನಿಗಳಾಗಿರುವ ಮುಂಬಯಿ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿಯವರ ತಾಯಿ ಸುನಂದ ಸಂಜೀವ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿ ಶುಭಹಾರೈಸಿದರು.
ಪಡುಕುಡೂರು ಭದ್ರಕಾಳಿ ಅಮ್ಮನವರ ದೇವಸ್ಥಾನ ಪ್ರಧಾನ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಸಂಚಾಲಕ ಪ್ರಸನ್ನ ಶೆಟ್ಟಿ, ಗೌರವಾಧ್ಯಕ್ಷ ಸುಧಾಕರ ಶೆಟ್ಟಿ ಮುನಿಯಾಲು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಕೇಶವ ನಾಯಕ್, ವಿವಿಧ ಪ್ರಮುಖರಾದ ಜಗದೀಶ ಹೆಗ್ಡೆ, ಅಶೋಕ್ ಎಂ. ಶೆಟ್ಟಿ, ಶಂಕರನಾರಾಯಣ ನಾಯಕ್ ಎಳ್ಳಾರೆ, ಶ್ರೀನಿವಾಸ ಆಚಾರ್ಯ, ದಿವಾಕರ ಶೆಟ್ಟಿ, ಜ್ಯೋತಿ ಪ್ರಸಾದ ಶೆಟ್ಟಿ, ಹರೀಶ ಪೂಜಾರಿ, ನಾಗಾರಾಜ ಆಚಾರ್ಯ, ಸವಿತಾ ಶೆಟ್ಟಿ, ರಾಘವೇಂದ್ರ ಆಚಾರ್ಯ ಸೇರಿದಂತೆ, ಶಾಲಾಭಿವೃದ್ಧಿ ಸಮಿತಿ, ಶತಮಾನೋತ್ಸವ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶತಮಾನೋತ್ಸವ ಸಂಭ್ರಮದ ಶತಸ್ಮೃತಿ ರಂಗಮಂದಿರಕ್ಕೆ ಗರಿಷ್ಠ ಮೊತ್ತದ ದೇಣಿಗೆ ನೀಡಿ ಶಿಲಾನ್ಯಾಸ ನೆರವೇರಿಸಿದ ಪಡುಪರ್ಕಳ ಸುನಂದ ಸಂಜೀವ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಖ್ಯ ಶಿಕ್ಷಕ ಹರೀಶ ಪೂಜಾರಿ ಅವರು ಸ್ವಾಗತಿಸಿ ವಂದಿಸಿದರು.



