ಹಾಸ್ಟೆಲ್ ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ.
ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಟ್ಯಾಲೆಂಟ್ ಶೋ ಕಾರ್ಯಕ್ರಮ ಮತ್ತು ಹಾಸ್ಟೆಲ್ ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಹಾಸ್ಟೆಲ್ ಕಮಿಟಿ ಗೌರವಾಧ್ಯಕ್ಷ ಯೋಗೀಶ್ ಭಟ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಾನವರಾಗಿ ನಾವು ಬೇರೆಯವರಿಗೆ ಸಹಾಯ ಮಾಡಬೇಕು ಆದರೆ ಅವರಿಂದ ಪ್ರತಿಫಲವಾಗಿ ಏನೂ ನಿರೀಕ್ಷಿಸಬಾರದು . ವ್ಯಕ್ತಿಗಳು ತಮ್ಮಲ್ಲಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಅವು ನಮ್ಮ ಮನಕ್ಕೆ ಸಂತೋಷ ನೀಡುತ್ತವೆ ಎಂದರು.
ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ. ಎಂ. ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುದಾಸ ಶೆಣೈ, ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟಿ ವಿಷ್ಣುಮೂರ್ತಿ ನಾಯಕ್ , ಪಿಆರ್ ಓ. ವಿಜಯ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕಿ ಶಕುಂತಲಾ ಅಪರ್ಣಾ ಆಚಾರ್, ಸಂಯೋಜಕಿ ಸುಗೀತಾ, ಚೀಫ್ ವಾರ್ಡನ್ ವಿರೂಪಾಕ್ಷ ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರಕಾಶ್ ಜೋಗಿ ಪ್ರತಿಜ್ಞಾ ವಿಧಿ ಭೋದಿಸಿದರು. ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ಮಾಡಿದರು. ನಿಲಯ ಪಾಲಕರು, ರೆಸಿಡೆನ್ಸಿಯಲ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



