Thursday, September 24, 2026
Homeಹೆಬ್ರಿಹೆಬ್ರಿ ಅಲಯನ್ಸ್ ಕ್ಲಬ್ ನಿಂದ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

ಹೆಬ್ರಿ ಅಲಯನ್ಸ್ ಕ್ಲಬ್ ನಿಂದ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

ಹೆಬ್ರಿ : ಹೆಬ್ರಿ ಅಲಯನ್ಸ್ ಕ್ಲಬ್ ವತಿಯಿಂದ ಹೆಬ್ರಿ ಇಂದಿರಾನಗರ ಅಂಗನವಾಡಿ ಕೇಂದ್ರಕ್ಕೆ ಸ್ಟೀಲಿನ ಕಪಾಟವನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮವು ಮಂಗಳವಾರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಅಲಯನ್ಸ್ ಕ್ಲಬ್ ಅಧ್ಯಕ್ಷರಾದ ಬಾಲಚಂದ್ರ ಎಂ. 6500 ಸಾವಿರ ರೂಪಾಯಿ ಮೌಲ್ಯದ ಕಪಾಟವನ್ನು ಅಂಗನವಾಡಿ ಶಿಕ್ಷಕಿ ಸುನೀತ ಅವರಿಗೆ ಹಸ್ತಾಂತರಿಸಿದರು.

ಅಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್, ಹೆಬ್ರಿ ಅಲಯನ್ಸ್ ಕ್ಲಬ್ ಸದಸ್ಯರಾದ ಎಚ್. ಕೆ. ನಾರಾಯಣ ನಾಯ್ಕ್, ಕೃಷ್ಣರಾಜ್ ಭಟ್ ಉಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿ, ಅಂಗನವಾಡಿ ಮಕ್ಕಳು, ಮಕ್ಕಳ ಪೋಷಕರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!