ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮೆದುಳು ದಿನಾಚರಣೆ ಉಡುಪಿಯ ಪೆರಂಪಳ್ಳಿಯ ಸೈಂಟ್ ಆಗ್ನೇಸ್ ಹಿರಿಯ ನಾಗರಿಕರ ವಸತಿ ನಿಲಯದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ವ ಮೆದುಳು ದಿನದ ಬ್ಯಾನರ್ ಮತ್ತು ಐಇಸಿ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಸಂಘಟಕಿಯಾದ ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಮೆದುಳು ಆರೋಗ್ಯದಲ್ಲಿ ಜೀವನ ಶೈಲಿ ಹಾಗೂ ಆಹಾರ ಶೈಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಕಭೀ ಕಾರ್ಯಕ್ರಮದಲ್ಲಿ, ನರಮಂಡಲದ ಖಾಯಿಲೆಗಳಾದ ತಲೆನೋವು. ಪಾರ್ಶ್ವವಾಯು, ಅಪಸ್ಮಾರ ಹಾಗೂ ಮರೆವು ಅಂತಹ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ನರಮಂಡಲದ ಖಾಯಿಲೆ ಇರುವಂತಹ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಇಂದ ಟೆಲಿ ನ್ಯೂರೋಲಾಜಿ ಎಂಬ ಸೇವೆಯನ್ನು ನೀಡಲಾಗುತ್ತದೆ. ಹೀಗೆ ಕಭೀ ಉತ್ತಮವಾದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕ್ಲಿನಿಕಲ್ ಸೈಕಾಲಜಿಸ್ಟ್ ರಕ್ಷಿತಾ ಎಂ., ಫಿಸಿಯೋಥೆರಪಿಸ್ಟ್ ಯಶಸ್ವಿನಿ ಸಮಗ್ರ ಮಾಹಿತಿ ನೀಡಿದರು. ಉಡುಪಿಯ ಪೆರಂಪಳ್ಳಿಯ ಸೈಂಟ್ ಆಗ್ನೇಸ್ ಹಿರಿಯ ನಾಗರಿಕರ ವಸತಿ ನಿಲಯದ ಮುಖ್ಯಸ್ಥೆ ಜ್ಯೋತಿ ಪಿಂಟೋ, ನಿಲಯದ ಕಾರ್ಯಕರ್ತರು, ವಿವಿಧ ಪ್ರಮುಖರು, ಅಧಿಕಾರಿಗಳು ಭಾಗವಹಿಸಿದ್ದರು.



