ಪೆರ್ಡೂರು : ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪೆರ್ಡೂರು ಅನಂತ ಸ್ಪರ್ಷ ಲೀಜನ್ ವತಿಯಿಂದ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ವಿಭಾಜಕದಲ್ಲಿ ಅಲಂಕಾರಿಕ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಪೆರ್ಡೂರು ಶ್ರೀಅನಂತ ಪದ್ಮನಾಭ ದೇಗುಲದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಕೊಯ್ತ್ಯಾರು ಗಿಡಗಳನ್ನು ನೆಟ್ಟುಚಾಲನೆ ನೀಡಿದರು.
ಸೀನಿಯರ್ ಛೇಂಬರ್ ಅಧ್ಯಕ್ಷ ಸೀನಿಯರ್ ಆನಂದ ಗೌಡ ಅಧ್ಯಕ್ಷತೆ ವಹಿಸಿದ್ದರು.
ನಿಕಟ ಪೂರ್ವ ಅಧ್ಯಕ್ಷ ಪುರುಷೋತ್ತಮ ಐತಾಳ್, ಕಾರ್ಯದರ್ಶಿ ಸತೀಶ್ ಎನ್ ಶೆಟ್ಟಿ, ಖಜಾಂಜಿ ವಸಂತ್ ಕುಮಾರ್ ಶೆಟ್ಟಿ, ನಿರ್ದೇಶಕ ಸುರೇಶ್ ಕರ್ಕೇರ ಮತ್ತು ಬಾಲಕೃಷ್ಣ ಆಚಾರ್ ಪಾಡಿಗಾರ್ ಉಪಸ್ಥಿತರಿದ್ದರು.ಪುರುಷೋತ್ತಮ ಐತಾಳ್ ನಿರೂಪಿಸಿದರು ಸತೀಶ್ ಎನ್ ಶೆಟ್ಟಿ ವಂದಿಸಿದರು.
ಒಟ್ಟು 450 ಗಿಡಗಳನ್ನು ನೆಡಲಾಯಿತು.


