ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆ ವಿಚಾರ ಮಂಡನೆ.
ಹೆಬ್ರಿ : ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹೆಬ್ರಿ ತಾಲ್ಲೂಕು ತಹಶೀಳ್ಧಾರ್ ಅವರನ್ನು ಭೇಟಿ ಮಾಡಿ ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆಯ ವಿಚಾರ ಮಂಡಿಸಿ, ಜಿಲ್ಲಾ ಛೇರ್ಮನ್ ಡಾ.ಅಶೋಕ್ ಕುಮಾರ್ ವೈ.ಜಿ ಅವರ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನಿಯೋಜಿತ ಚೇರ್ಮನ್ ವೀಣಾ ಆರ್ ಭಟ್, ವೈಸ್ ಛೇರ್ಮನ್ ಡಾ. ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳಾದ ಜನಾರ್ದನ.ಹೆಚ್, ಬಾಲಚಂದ್ರ ಎಂ., ಸೋನಿ ಪಿ.ಶೆಟ್ಟಿ, ವಿದ್ಯಾ ಜನಾರ್ಧನ್ ಉಪಸ್ಥಿತರಿದ್ದರು.


