Wednesday, August 19, 2026
Homeಹೆಬ್ರಿಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 18ನೇ ವರ್ಷದ ಜಿಲ್ಲಾಮಟ್ಟದ  "ವಿಜ್ಞಾನ ಮೇಳ"ಗಣಿತ, ವೇದಗಣಿತ ,ಯೋಗ...

ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 18ನೇ ವರ್ಷದ ಜಿಲ್ಲಾಮಟ್ಟದ  “ವಿಜ್ಞಾನ ಮೇಳ”ಗಣಿತ, ವೇದಗಣಿತ ,ಯೋಗ ಸಂಸ್ಕೃತಿ ಜ್ಞಾನ ಮಹೋತ್ಸವ 2026.

ಹೆಬ್ರಿ : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 18ನೇ ವರ್ಷದ ಜಿಲ್ಲಾಮಟ್ಟದ “ವಿಜ್ಞಾನ ಮೇಳ”ಗಣಿತ, ವೇದಗಣಿತ ,ಯೋಗ ಸಂಸ್ಕೃತಿ ಜ್ಞಾನ ಮಹೋತ್ಸವ 2026 “ಕೇಶವ ಭವನ” ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ನಡೆಯಿತು.

ನಾವುಂದ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಕೆ.ಪಿ ಮಹೋತ್ಸವ ಉದ್ಘಾಟಿಸಿ ಮಾತನಾಡಿ “ಸೋಲೇ ಗೆಲುವಿನ ಸೋಪಾನ, ಸೋತಾಗ ಚಿಂತಿಸದೆ, ಗೆದ್ದಾಗ ಬೀಗದೇ ಎರಡನ್ನು ಸಮ ಸ್ಥಿತಿಯಲ್ಲಿ ಸ್ವೀಕರಿಸಿ ಎಂದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಪಾಂಡುರಂಗ ಪೈ ಮಾತನಾಡಿ ಜ್ಞಾನವಿಜ್ಞಾನ ಮೇಳವಿಸಿದಾಗ ಬದುಕು ಸುಂದರವಾಗುತ್ತದೆ ಎಂದರು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರಾದ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ “ಸತತ ಪ್ರಯತ್ನವಿದ್ದರೆ ಗೆಲುವು ನಿಶ್ಚಿತ” ಎಂದರು.

ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ ವಿಜಯ್ ಕುಮಾರ್ ಶೆಟ್ಟಿ, ವಿದ್ಯಾಭಾರತಿ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ, ಸಂಸ್ಕೃತಿ ಜ್ಞಾನ ಪ್ರಮುಖ್ ಜ್ಯೋತಿ ಎಳ್ಳಾರೆ, ಜಿಲ್ಲಾ ವಿಜ್ಞಾನ ಪ್ರಮುಖ ಪ್ರಶ್ಮಿತ ಬ್ರಹ್ಮಾವರ, ಜಿಲ್ಲಾ ಗಣಿತ ಪ್ರಮುಖ್ ಜ್ಯೋತಿ ಸಿದ್ದಾಪುರ ಉಪಸ್ಥಿತರಿದ್ದರು.

ಅಮೃತ ಭಾರತಿ ಟ್ರಸ್ಟನ ಸದಸ್ಯರು, ಟ್ರಸ್ಟಿಗಳು ಉಪಸ್ಥಿತರಿದ್ದರು. 2025-26ನೇ ಸಾಲಿನ 10ನೇ

ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ, ವಿದ್ಯಾ ಭಾರತಿ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಲ್ಲಿ ಓದಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಲಾವಣ್ಯ ಹೆಚ್ .ವಿ ಮತ್ತು ಅವನೀಶ್. ಆರ್. ರಾವ್ ಅವರನ್ನು “ಅಂಗಳ “ಕಾರ್ಯಕ್ರಮದ ಮೂಲಕ ಸನ್ಮಾನಿಸಲಾಯಿತು. 30ಕ್ಕೂ ಅಧಿಕ ಮಂದಿ ತೀರ್ಪುಗಾರರು ವಿವಿಧ ಸ್ಪರ್ಧೆಗಳಿಂದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿದರು. ೧೦ಕ್ಕೂ ಅಧಿಕ ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು,350ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಗಳ ಪ್ರಯೋಜನ ಪಡೆದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments