Wednesday, August 19, 2026
Homeಚಾರ ಗ್ರಾಮ ಪಂಚಾಯತ್‌ಚಾರ : ಉಚಿತ ನೇತ್ರ ತಪಾಸಣಾ ಶಿಬಿರ; ರಕ್ತದ ಒತ್ತಡ - ಸಕ್ಕರೆ ಖಾಯಿಲೆ ತಪಾಸಣೆ.

ಚಾರ : ಉಚಿತ ನೇತ್ರ ತಪಾಸಣಾ ಶಿಬಿರ; ರಕ್ತದ ಒತ್ತಡ – ಸಕ್ಕರೆ ಖಾಯಿಲೆ ತಪಾಸಣೆ.

ಆರೋಗ್ಯದ ಕಾಳಜಿ ಎಲ್ಲರೂ ವಹಿಸಬೇಕು : ರೇಷ್ಮಾ.

ಚಾರ : ಹೆಬ್ರಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಚಾರ ವಲಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಪ್ರಸಾದ್ ನೇತ್ರಾಲಯ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಚಾರ ಬೇಳಂಜೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇದರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ, ರಕ್ತದ ಒತ್ತಡ ಹಾಗೂ ಶುಗರ್ ತಪಾಸಣಾ ಕಾರ್ಯಕ್ರಮ ಇತ್ತೀಚೆಗೆ ನಡೆಸಲಾಯಿತು. ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಪ್ರೇಮ್ ಕಾರ್ಯಕ್ರಮ ಉದ್ಘಾಟಿಸಿ ಕಣ್ಣಿನ ರಕ್ಷಣೆ, ಯಾವ ಸಮಸ್ಯೆಯಿಂದ ಕಣ್ಣಿಗೆ ತೊಂದರೆಗಳಾಗುತ್ತದೆ ಎಂಬ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈಧ್ಯೆ ಡಾ. ರಮಾಮಣಿ ಬಿಪಿ, ಶುಗರ್ ಪ್ರತಿ ೩ ತಿಂಗಳಿಗೊಮ್ಮೆ ತಪಾಸಣೆ ಮಾಡಿಕೊಳ್ಳಬೇಕು. ಸೇವಿಸುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಮಾಹಿತಿ ನೀಡಿದರು.ಹೆಬ್ರಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಯೋಜನಾಧಿಕಾರಿ ರೇಷ್ಮಾ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು, ಮಾತೃಶ್ರೀ ಹೇಮಾವತಿ ಅಮ್ಮನವರ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಚಾರ ವಲಯದ ಅಧ್ಯಕ್ಷೆ ಜ್ಯೋತಿ, ಭಜನಾ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ್, ಚಾರ ವಲಯ ಶೌರ್ಯ ಘಟಕದ ಅಧ್ಯಕ್ಷ ಚಂದ್ರ ನಾಯಕ್, ಪ್ರಸಾದ್ ನೇತ್ರಾಲಯದ ಸಂಪರ್ಕ ಅಧಿಕಾರಿ ಗಣೇಶ, ಉಪಸ್ಥಿತರಿದ್ದರು. ಸುಮಾರು 160 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರವತಿ ನಿರೂಪಿಸಿದರು. ಚಾರ ವಲಯ ಮೇಲ್ವಿಚಾರಕಿ ರೇವತಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಲತಾ ವಂದಿಸಿದರು. ಶೌರ್ಯ ಘಟಕದ ಎಲ್ಲಾ ಸದಸ್ಯರು ಸಹಕಾರ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments