ಕರ್ತವ್ಯಕ್ಕೆ ಅಡ್ಡಿ ಕೇಸು.
ಹೆಬ್ರಿ: ಅರಣ್ಯದಲ್ಲಿ ಹಾಲು ಮಡ್ಡಿ ಸಂಗ್ರಹ ಮಾಡುತ್ತಿದ್ದ ಬೇಳಂಜೆ ಗ್ರಾಮದ ನಿವಾಸಿಗಳಾದ ಶಿವರಾಮ ನಾಯ್ಕ ಮತ್ತು ಅವರ ಮಗ ಅರುಣ್ ಅವರ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಅರಣ್ಯ ವೀಕ್ಷಕರಾದ ಕನಕಪ್ಪ ಮತ್ತು ರಾಮಚಂದ್ರ ಸೋಮೇಶ್ವರ ವನ್ಯ ಜೀವಿ ವಲಯದ ಕುಚ್ಚೂರು ವನ್ಯಜೀವಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡಿದ್ದು ಕುಚ್ಚೂರು ಗ್ರಾಮದ ಹಣೆಗೋಡು ಎಂಬಲ್ಲಿ ಗಸ್ತು ತಿರುಗುವಾಗ ಆಗಸ್ಟ್ 13 ರಂದು ಬೆಳಿಗ್ಗೆ 11:00 ಗಂಟೆಗೆ ಬೇಳಂಜೆ ಗ್ರಾಮದ ನಿವಾಸಿಗಳಾದ ಶಿವರಾಮ ನಾಯ್ಕ್ ಮತ್ತು ಅವರ ಮಗ ಅರುಣ್ ಅರಣ್ಯ ವೀಕ್ಷಕರನ್ನು ನೋಡಿ ಓಡಲು ಪ್ರಯತ್ನಿದ್ದು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಶಿವರಾಮ ನಾಯ್ಕ್ ತನ್ನ ಕೈಯಲ್ಲಿ ಇದ್ದ ಸಟ್ಟುಗ ಹಾಗೂ ಅರುಣ್ ತನ್ನ ಕೈಯಲ್ಲಿ ಕತ್ತಿ ಹಿಡಿದು ಹತ್ತಿರ ಬಂದರೆ ಕಡಿಯುವುದಾಗಿ ಹೇಳಿ ಅರಣ್ಯ ವೀಕ್ಷಕರ ಕಡೆ ಕಲ್ಲನ್ನು ಬಿಸಾಡಿ ಹಾಲುಮಡ್ಡಿ ಮರದಿಂದ ಕೆತ್ತಿ ಸಂಗ್ರಹಿಸಿದ ಸುಮಾರು 1 ಕೆಜಿಯಷ್ಟು ಮೇಣ ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗಿದ್ದಾರೆ.
ಶಿವರಾಮ ನಾಯ್ಕ್ ಮತ್ತು ಅರುಣ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಕತ್ತಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅರಣ್ಯ ವೀಕ್ಷಕ ಕನಕಪ್ಪ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2026 ದೂರು ದಾಖಲಾಗಿದೆ.
ಹೆಬ್ರಿ ಅರಣ್ಯ ಇಲಾಖೆಯಲ್ಲಿಯೂ ಪ್ರಕರಣ ದಾಖಲಾಗಿದೆ.


