Wednesday, August 19, 2026
Homeನಾಡ್ಪಾಲು ಗ್ರಾಮ ಪಂಚಾಯತ್‌ನಂದಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯಾವೂದೇ ಸಮಸ್ಯೆಗಳಿಲ್ಲ : ತಿಂಗಳೆ ಧೀರಜ್‌ ಶೆಟ್ಟಿ

ನಂದಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯಾವೂದೇ ಸಮಸ್ಯೆಗಳಿಲ್ಲ : ತಿಂಗಳೆ ಧೀರಜ್‌ ಶೆಟ್ಟಿ

ಸುಳ್ಳು ಅಪಾದನೆ ಮಾಡಿ ಕುಟುಂಬಸ್ಥರ ತೇಜೋವಧೆ.

ನಾಡ್ಪಾಲು : ಹೆಬ್ರಿ ತಾಲ್ಲೂಕಿನ ನಾಡ್ಪಾಲು ನಂದಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯಾವೂದೇ ಸಮಸ್ಯೆಗಳಿಲ್ಲ, ವಿಜಯ ಶೆಟ್ಟಿ ಮತ್ತವರ ತಂಡ ದೇವಸ್ಥಾನ, ಆಡಳಿತ ಮೋಕ್ತೇಸರರು ಮತ್ತು ಅವರ ಕುಟುಂಬಸ್ಥರ ವಿರುದ್ಧ ಸುಳ್ಳು ಅಪಾದನೆ ಮಾಡಿ ಕುಟುಂಬಸ್ಥರ ತೇಜೋವಧೆ ಮಾಡುವು ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಂಗಳೆ ಧೀರಜ್‌ ಶೆಟ್ಟಿ ಹೇಳಿದರು. ಅವರು ಗುರುವಾರ ಸಭೆ ನಡೆಸಿ ಮಾಹಿತಿ ನೀಡಿದರು.

ದೇವಸ್ಥಾನದಲ್ಲಿ ಯಾವ ಸಮಸ್ಯೆಯೂ ಇಲ್ಲ, ಕಾನೂನಿನ ಪ್ರಕಾರ ನ್ಯಾಯಲಯದ ನಿರ್ದೇಶನದಂತೆ ಎಲ್ಲವೂ ನಡೆಯುತ್ತಿದೆ. ಕಾಣಿಕೆಯ ಹುಂಡಿಯನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಆರೋಪ ಮಾಡುತ್ತಿರುವ ಸಮ್ಮುಖದಲ್ಲೇ ಶೀಲ್‌ ಮಾಡಲಾಗಿದೆ.

ಭಕ್ತರಿಂದ ಹಣ ಪಡೆಯಬಾರದೆಂದು ಕೋರ್ಟ್‌ ನಿರ್ದೇಶನ ನೀಡಿದ ಕಾರಣಕ್ಕೆ ಹುಂಡಿಯನ್ನು ಬದಿಗೆ ಇರಿಸಲಾಗಿದೆ. ಅದಕ್ಕೂ ಸಾಕ್ಷಿಯಿದೆ. ನ್ಯಾಯಲಯದಲ್ಲಿ ತೀರ್ಪು ತಿಂಗಳೆ ಮನೆತನದ ಪರವಾಗಿ ಬಂದ ಮೇಲೆ ಹತಾಶೆಯಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಂಗಳೆ ಧೀರಜ್‌ ಶೆಟ್ಟಿ ಹೇಳಿದರು.
೨ ಲಕ್ಷ ರೂಪಾಯಿ ಹಣವನ್ನು ನಾವು ಉಪಯೋಗಿಸಿಲ್ಲ, ಡೆಪಾಸಿಟ್‌ ಇದ್ದ ಹಣವನ್ನು ಭೋಜನಶಾಲೆ ನಿರ್ಮಾಣ ಮಾಡುವಾಗ ಅದಕ್ಕೆ ಬಳಕೆ ಮಾಡಲಾಗಿದೆ ಎಂದು ತಿಂಗಳೆ ಸುಪ್ರೀತ್‌ ಭಂಡಾರಿ ಮಾಹಿತಿ ನೀಡಿದರು.
ತಿಂಗಳೆ ಕುಟುಂಬಸ್ಥರು ಹಿರಿಯರ ಕಾಲದಿಂದ ಈ ತನಕ ನಂದಲ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ದೇವಸ್ಥಾನ ತಿಂಗಳೆ ಕುಟುಂಬಕ್ಕೆ ಸೇರಿದೆ, ಭಕ್ತರಿಗೆ ಮುಕ್ತ ಪ್ರವೇಶಕ್ಕೆ ಅವಕಾಶವಿದೆ. ಯಾವೂದೇ ಗೊಂದಲಗಳಿಲ್ಲ, ಇತ್ತೀಚಿನ ತನಕವೂ ಎಲ್ಲರವೂ ಸಾಂಗವಾಗಿಯೇ ನಡೆಯುತ್ತಿತ್ತು. ಈಗ ಕೆಲವರ ಗುಂಪು ಸಾರ್ವಜನಿಕವಾಗಿ ಗೊಂದಲ ಮೂಡಿಸುತ್ತಿದೆ. ನಂದಲ ಕ್ಷೇತ್ರದ ಬಗ್ಗೆ ಊರಿನ ಎಲ್ಲರಿಗೂ ಗೊತ್ತಿದೆ ಎಂದು ತಿಂಗಳೆ ಧೀರಜ್‌ ಶೆಟ್ಟಿ ಹೇಳಿದರು.

ನಾವು ಅಭಿವೃದ್ಧಿಗಾಗಿ ಬಂದಿದ್ದೇವೆ ಎಂದು ತಂಡದವರು ಅಪಪ್ರಚಾರ ಮಾಡುತ್ತಾರೆ. ಅಭಿವೃದ್ಧಿ ಮಾಡುವವರು ಮರವನ್ನು ಯಾಕೆ ಕಡಿದರು, ಕ್ಷೇತ್ರದ ಬಗೆಗೆ ಅಪಪ್ರಚಾರವೇ ಅವರ ಉದ್ದೇಶ ಎಂದು ಹರೀಶ ಶೆಟ್ಟಿ ನಾಡ್ಪಾಲು ಹೇಳಿದರು. ಆಡಳಿತ ಮೋಕ್ತೇಸರರಾದ ಮನೋರಮಾ ಎಸ್‌ ಶೆಟ್ಟಿ ನೇತ್ರತ್ವದಲ್ಲಿ ಪೂಜೆ ಧಾರ್ಮಿಕ ವಿಧಿವಿಧಾನಗಳು, ವಾರ್ಷಿಕ ಜಾತ್ರೆ ಸೇರಿ ಎಲ್ಲವೂ ನಡೆಯುತ್ತಿದೆ. ಭಕ್ತರಿಗೆ ಯಾವೂದೇ ಸಮಸ್ಯೆಗಳಿಲ್ಲ ಎಂದು ಹರೀಶ ಶೆಟ್ಟಿ ನಾಡ್ಪಾಲು ಹೇಳಿದರು.

ಇವರು ಅಭಿವೃದ್ಧಿ, ಸರ್ಕಾರ ಸರ್ಕಾರ ಎನ್ನುತ್ತಾರೆ. ನಾವು ಸುಣ್ಣಬಣ್ಣ ಸೇರಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಸಿಸಿಟಿವಿ ಅಳವಡಿಸಿದ್ದೇವೆ. ನಮಗೆ ಅದರ ಬಿಲ್‌ ಪಾವತಿಯಾಗಿಲ್ಲ, ಸರ್ಕಾರ ಹೇಳುವವರು ಬಿಲ್‌ ಪಾವತಿಯ ಬಗ್ಗೆ ಯಾಕೆ ಹೇಳುತ್ತಿಲ್ಲ ಎಂದು ಸೋಮೇಶ್ವರದ ವೆಂಕಟೇಶ ಶೆಟ್ಟಿ ಪ್ರಶ್ನಿಸಿದರು.
ವಿಜಯ ಶೆಟ್ಟಿ, ಸುಧಾಕರ ಗೌಡ ಮತ್ತವರ ತಂಡಕ್ಕೆ ದೇವಸ್ಥಾನದ ಆಡಳಿತ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ದೇವಸ್ಥಾನದ ಬಗ್ಗೆ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿಂಗಳೆ ಧೀರಜ್‌ ಶೆಟ್ಟಿ ಹೇಳಿದರು.
ತಿಂಗಳೆ ಸರಿತಾ ಪಿ, ಭಂಡಾರಿ, ತಿಂಗಳೆ ಸುಪ್ರೀತ್‌ ಭಂಡಾರಿ, ಪ್ರಹ್ಲಾದ ಭಂಡಾರಿ, ಪ್ರಧಾನ ಅರ್ಚಕ ನರಸಿಂಹ ಆಚಾರ್ಯ, ಅರುಣ್‌, ನೇತ್ರಾವತಿ ಶೆಟ್ಟಿ, ಸಂತೋಷ ಶೆಟ್ಟಿ, ವೆಂಕಟೇಶ ಶೆಟ್ಟಿ, ವಿಶು ಕುಮಾರ್‌ ಶೆಟ್ಟಿ, ಉಮೇಶ ಶೆಟ್ಟಿ ಅಜ್ಜೋಳ್ಳಿ ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments