ಕಡ್ತಲ : ಎಳ್ಳಾರೆಯ ಮುಳ್ಕಾಡು ಸರ್ಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಲಯನ್ಸ್ ಕ್ಲಬ್ ಮುನಿಯಾಲು ಅಧ್ಯಕ್ಷ ಅಶೋಕ್ ಕುಮಾರ್ ಕುಕ್ಕುಜೆ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು SDMC ಅಧ್ಯಕ್ಷ ಹರೀಶ್ ನಾಯ್ಕ್ ವಹಿಸಿದ್ದರು. Dr ಪ್ರಮೋದ್ ಕುಮಾರ್ ಹೆಗ್ಡೆ, ಗೋಪಿನಾಥ್ ಭಟ್,Dr ಸುದರ್ಶನ್ ಹೆಬ್ಬಾರ್, ಹರೀಶ್ ದುಗ್ಗನ್ ಬೆಟ್ಟು , ಸತೀಶ್ ಪೂಜಾರಿ,ನಾಗೇಶ್ ಪೂಜಾರಿ, ರವೀಂದ್ರ ಪ್ರಭು,ಜಗದೀಶ್ ಬೆಂಗಳೂರು, ಮುಂತಾದವರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯರಾದ ಜನಾರ್ಧನ ಬೆಳಿರಾಯ ಸ್ವಾಗತಿಸಿದರು. ಸುಭಾಸ್ ನಿರೂಪಿಸಿದರು.ಪ್ರಫುಲ್ಲ ವಂದಿಸಿದರು.ನಿಶಾ,ರೂಪ ಕಲಾವತಿ ಸಹಕರಿಸಿದರು. ಮಕ್ಕಳಿಂದ ವಿವಿಧ ವಿನೋದಾವಳಿ ನಡೆಯಿತು.



