ಖಜಾನೆ – ಪಡುಕುಡೂರು ಇನ್ನೂ ಬಗೆಹರಿಯದ ರಸ್ತೆ ಸಮಸ್ಯೆ.
ಪ್ರತಿ ದಿನವೂ ಅಪಾಯಕ್ಕೆ ಸಿಲುಕುವ ವಾಹನಗಳು.
ವಾಹನ ಸವಾರರಿಗೆ ರಸ್ತೆ ಕಂದಕ ಗೊತ್ತಾಗದೆ ಅಪಾಯ !
ಪಡುಕುಡೂರು : ಖಜಾನೆ ಪಡುಕುಡೂರು ಮುನಿಯಾಲು ಮುಖ್ಯ ರಸ್ತೆಯ ಪಡುಕುಡೂರು ಶಾಲೆಯ ಬಳಿಯಲ್ಲಿ ಆಗಿರುವ ರಸ್ತೆಯ ಸಮಸ್ಯೆಯು ಇನ್ನೂ ಬಗೆಹರಿದಿಲ್ಲ.
ಇದರಿಂದಾಗಿ ನಿತ್ಯವೂ 4 ಚಕ್ರದ ವಾಹನಗಳು ರಸ್ತೆಯ ಕಂದಕ ತಿಳಿಯದೆ ಅಪಾಯಕ್ಕೆ ಸಿಲುಕುತ್ತದೆ. ಇತ್ತೀಚೆಗೆ ಪಿಕ್ ಅಪ್ ವಾಹನವೊಂದು ಕಂದಕ್ಕೆ ಉರುಳುವ ಹಂತಕ್ಕೆ ತಲುಪಿತ್ತು. ಬಳಿಕ ಸ್ಥಳೀಯರು ಸೇರಿ ವಾಹನವನ್ನು ಎಳೆದು ಅಪಾಯದಿಂದ ತಪ್ಪಿಸಿದರು.
ಪ್ರತಿದಿನವೂ ಬೈಕ್ ಗಳು ಹೊಂಡಕ್ಕೆ ಬೀಳುತ್ತಿವೆ.
ಅಪರೂಪಕ್ಕೆ ಇದೇ ರಸ್ತೆಯಲ್ಲಿ ಬರುವವರಿಗೆ ಕಂದಕದ ಅರಿವಾಗದೆ ವಾಹನ ಸಿಲುಕಿಕೊಳ್ಳುತ್ತಿದೆ.
ಸಚಿವರ ಸೂಚನೆಗೂ ಕಿವಿಗೊಡದ ಅಧಿಕಾರಿಗಳು.
ಪಡುಕುಡೂರು ರಸ್ತೆಯ ಗಂಭೀರ ಸ್ವರೂಪದ ಸಮಸ್ಯೆಯನ್ನು ಸ್ಥಳೀಯ ಪ್ರಮುಖರಾದ ಭಾರವಿ ಶೆಟ್ಟಿ ಪಟೇಲರ ಮನೆ, ಭುಜಂಗ ಶೆಟ್ಟಿ ಮತ್ತು ಪ್ರಸನ್ನ ಶೆಟ್ಟಿಯವರ ನೇತ್ರತ್ವದಲ್ಲಿ ಹೆಬ್ರಿಗೆ ಇತ್ತೀಚೆಗೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರಿಗೆ ಮನವರಿಕೆ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದರು.
ಸಮಸ್ಯೆ ಅರಿತ ಸಚಿವರು ಯಾವೂದೇ ತಾಂತ್ರಿಕ ಸಮಸ್ಯೆಗಳಿದ್ದರೂ ಜನರಿಗೆ ತೊಂದರೆಯಾಗಬಾರದು. ರಸ್ತೆಯ ಸಮಸ್ಯೆಯನ್ನು ಬಗೆರಹರಿಸಿ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚಿಸಿದರೂ ರಸ್ತೆಯ ಸಮಸ್ಯೆ ಹಾಗೇಯೆ ಉಳಿದಿದೆ.
ಊರಿನ ನವರು, ರಸ್ತೆ ಸವಾರರು ಅಪಾಯದ ಭಯದಲ್ಲೇ ಸಂಚರಿಸಬೇಕಾಗಿದೆ.
ಒಂದೇ ಬದಿಯಲ್ಲಿ ಘನವಾಹನಗಳು ಸಂಚರಿಸಿ ಬೃಹತ್ ಸರಿಯಿದ್ದ ಒಂದು ಬದಿಯ ರಸ್ತೆಯಲ್ಲೂ ಸಂಚಾರಿಸುವುದು ಕಷ್ಟವಾಗಿದೆ.
-ರಾಜಕೀಯಗಳು, ಸಮಸ್ಯೆಗಳು ಏನೂ ಇದ್ದರು ಅದು ನಮ್ಮ ಸಮಸ್ಯೆ ಅಲ್ಲ. ರಸ್ತೆಯ ಸಮಸ್ಯೆಯು ಅತೀ ಶೀಘ್ರವಾಗಿ ಪರಿಹಾರವಾಗಬೇಕು. ರಸ್ತೆಯಲ್ಲಿ ಸಂಚರಿಸುವುದೇ ಅತ್ಯಂತ ಕಷ್ಟವಾಗಿದೆ.
–
ಭಾರವಿ ಶೆಟ್ಟಿ ಪಟೇಲರ ಮನೆ ಪಡುಕುಡೂರು.




