ಮುನಿಯಾಲು ಕಾಡುಹೊಳೆ : ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ 17ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ವೃತ ಪೂಜೆಯು ಶ್ರೀ ಮಠದ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ನಡೆಯಿತು.
ಮುತ್ತೈದೆಯರು ಮನೆ ಮನೆಗಳಲ್ಲಿ ಭಕ್ತಿ ಶ್ರದ್ಧೆಯಿಂದ ದೈನಂದಿನ ದಿನಗಳಲ್ಲಿ ಲಕ್ಷ್ಮಿಯನ್ನು ಆರಾಧಿಸಿದಲ್ಲಿ ಸುಭೀಕ್ಷೆಯಿಂದ ಜೀವನ ನಡೆಸಲು ಸಾಧ್ಯ ಎಂದು ರಾಘವೇಂದ್ರ ಭಟ್ ಉಪನ್ಯಾಸ ನೀಡಿದರು.
ಮುನಿಯಾಲು, ಕಾಡುಹೊಳೆ ಪರಿಸರದ ನೂರಾರು ಮಂದಿ ಮಹಿಳೆಯರು ವೃತ ಪೂಜೆಯಲ್ಲಿ ಭಾಗವಹಿಸಿದರು. ಕಾಡುಹೊಳೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.




