Thursday, September 24, 2026
Homeಹೆಬ್ರಿಹೆಬ್ರಿ :ಅಮೃತ ಭಾರತಿ ವಿದ್ಯಾ ಕೇಂದ್ರದ ಮೆರುಗು ಹೆಚ್ಚಿಸಿದ ವಿದ್ಯಾರ್ಥಿ ಸಾಧಕರು:ಕಿಶೋರ ವರ್ಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ...

ಹೆಬ್ರಿ :ಅಮೃತ ಭಾರತಿ ವಿದ್ಯಾ ಕೇಂದ್ರದ ಮೆರುಗು ಹೆಚ್ಚಿಸಿದ ವಿದ್ಯಾರ್ಥಿ ಸಾಧಕರು:ಕಿಶೋರ ವರ್ಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 12 ಮಂದಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಸೂರ್ಯ ಚೈತನ್ಯ ಗ್ಲೋಬಲ್ ಸ್ಕೂಲ್ ಕುತ್ಯಾರು ಇಲ್ಲಿ ನಡೆದ “18ನೇ ವರ್ಷದ ವಿಜ್ಞಾನ ಮೇಳ”ದಲ್ಲಿ ಸ್ಪರ್ಧಿಸಿ ,ಅಮೃತ ಭಾರತಿ ವಿದ್ಯಾ ಕೇಂದ್ರದ ಕಿಶೋರ ವರ್ಗದ (9,10ನೇ ತರಗತಿ) ಒಟ್ಟು 12 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು” ರಾಜ್ಯಮಟ್ಟ”ಕ್ಕೆ ಆಯ್ಕೆಯಾಗಿರುತ್ತಾರೆ.
ವಿಜ್ಞಾನ ಮಾದರಿ :ಪ್ರಣವ್ ಡಿ.ಜಿ, ವಿಜ್ಞಾನ ರಸಪ್ರಶ್ನೆ : ವಿದ್ವಾನ್ ಎಂ ನಾಯಕ್ ,ಅಕ್ಷರ ರಾಘವೇಂದ್ರ ಭಟ್, ಸಿಂಚನಾ ಶೆಟ್ಟಿ, ವಿಜ್ಞಾನ ಪ್ರಾತ್ಯಕ್ಷಿಕೆ :ಆಯುಷ್.ಆರ್, ಗಣಿತ ಮಾದರಿ :ವರ್ಷಿತಾ ವೈಲಾಯ, ಗಣಿತ ಪ್ರಾತ್ಯಕ್ಷಿಕೆ :ಶ್ರೀ ದತ್ತ ಸಿ.ಎಂ, ವಿಜ್ಞಾನ ಮಾದರಿ: ಶ್ರೀನಿವಾಸ್ ನಾಯಕ್, ಸಂಸ್ಕೃತಿ ಜ್ಞಾನ ರಸಪ್ರಶ್ನೆ :ಸ್ವಸ್ತಿ ಕೆ ಎಸ್ ,ಅಶ್ವಿಜಿ ಎ.ರಾವ್ ಕೃಷ್ಣಪ್ರಸಾದ್ ಭಟ್, ಗಣಿತ ಮಾದರಿ :ಕುಶಿಕ ಶರ್ಮ ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ಮುಂದೆ ಬಳ್ಳಾರಿಯಲ್ಲಿ ಸೆಪ್ಟೆಂಬರ್ 4, 5, 6 ರಂದು ನಡೆಯುವ “ಪ್ರಾಂತೀಯ ಗಣಿತ ,ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ” ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿರುವರು .

ವಿಜೇತರನ್ನು ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಶ್ರೀಯುತ ಗುರುದಾಸ್ ಶೆಣೈ, ಅಮೃತ ಭಾರತಿ ಟ್ರಸ್ಟ್ ಇದರ ಟ್ರಸ್ಟಿಗಳು, ಸರ್ವ ಸದಸ್ಯರು ಪ್ರಾಂಶುಪಾಲರಾದ ಅರುಣ್ ಹೆಚ್ .ವೈ ,ಗುರುವೃಂದ, ಶಾಲಾ ಸಿಬ್ಬಂದಿಗಳು ಅಭಿನಂದಿಸಿ ಮುಂದಿನ ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!