ಹೆಬ್ರಿ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹೆಬ್ರಿ ಶಾಖೆಯಲ್ಲಿ ನಬಾರ್ಡ್ ಸಹಯೋಗದಲ್ಲಿ ಬುಧವಾರ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.
ಎಫ್‌ಎಲ್‌ಸಿಯ ಪ್ರದೀಪ್ ಕುಮಾರ್ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಮಾಹಿತಿ ನೀಡಿದರು. ಡಿಸಿಸಿ ಬ್ಯಾಂಕ್ ಮೆಲ್ವೀಚಾರಕ ಜಯಂತ್ ಕುಮಾರ್ ಮಾತನಾಡಿ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಿದರು. ಪ್ರಗತಿಪರ ಕೃಷಿಕರಾದ ಎಚ್. ರಾಜೀವ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹೆಬ್ರಿ ಶಾಖೆಯ ಮ್ಯಾನೇಜರ್ ಪ್ರಮೋದಾ ಕುಮಾರಿ, ಗ್ರಾಹಕರು, ಬ್ಯಾಂಕಿನ ಸಿಬಂದ್ಧಿ ವರ್ಗದವರು ಉಪಸ್ಥಿತರಿದ್ದರು.




