Thursday, September 24, 2026
Homeಹೆಬ್ರಿಶಿಕ್ಷಣ ಇಲಾಖೆಯ ನಿವೃತ್ತ ಮ್ಯಾನೇಜರ್ ಶಿವ ನಾಯ್ಕ್‌ ಕುಚ್ಚೂರು ನಿಧನ

ಶಿಕ್ಷಣ ಇಲಾಖೆಯ ನಿವೃತ್ತ ಮ್ಯಾನೇಜರ್ ಶಿವ ನಾಯ್ಕ್‌ ಕುಚ್ಚೂರು ನಿಧನ

ಕುಚ್ಚೂರು : ಹೆಬ್ರಿ ತಾಲ್ಲೂಕಿನ ಕುಚ್ಚೂರು ಹಾಡಿಮನೆ ನಿವಾಸಿ ಶಿಕ್ಷಣ ಇಲಾಖೆಯ ನಿವೃತ್ತ ಮ್ಯಾನೇಜರ್ ಶಿವ ನಾಯ್ಕ್‌ ( ೭೪ ) ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಪ್ರಥಮದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ ಶಿವ ನಾಯ್ಕ್‌ ಅವರು ಶಿಕ್ಷಣ ಇಲಾಖೆಯಲ್ಲಿ ಅಧೀಕ್ಷಕರಾಗಿ ಮ್ಯಾನೇಜರ್ ಆಗಿ ಹುದ್ದೆಯನ್ನು ನಿರ್ವಹಿಸಿ ಜನಮನ್ನಣೆ ಪಡೆದಿದ್ದರು.

ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಕುಚ್ಚೂರು ಕಾನ್ಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರೀಯ ಸದಸ್ಯರಾಗಿದ್ದರು. ಮೃತರಿಗೆ ಪತ್ನಿ ೨ ಹೆಣ್ಣು ಮತ್ತು ೧ ಗಂಡು ಮಗ ಇದ್ದಾರೆ. ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!