ನವಂಬರ್ 10 ರಂದು ಕಾರ್ಯಕ್ರಮ.
ಹೆಬ್ರಿ : ಸಿಎಸ್‌ಐ ಕೆ.ಎಸ್.ಡಿ ಉಡುಪಿ ಪ್ರಾದೇಶಿಕ ಪರಿಷತ್ತಿನ ವತಿಯಿಂದ ಹೆಬ್ರಿಯ ಸಿಎಸ್‌ಐ ಇಮ್ಮಾನುವೇಲ್ ದೇವಾಲಯದ ಆತಿಥ್ಯದಲ್ಲಿ ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಕಾರ್ಯಕ್ರಮ ಇದೇ 10 ರಂದು ಬೆಳಿಗ್ಗೆ 9 ರಿಂದ ದೇವಾರಾಧನೆಯೊಂದಿಗೆ ನಡೆಯಲಿದೆ.

ಯೇಸುವಿನೊಂದಿಗೆ ನಡೆಯೋಣ ಮುಖ್ಯ ಪ್ರಸ್ತಾಪ ನಡೆಯಲಿದೆ. ಭಾನುವಾರ ಶಾಲಾ ಸಂಚಾಲಕರಾದ ರೆವೆ. ಸ್ಯಾಮುವೇಲ್ ಮನೋಜ್ ಕುಮಾರ್ ಮುಖ್ಯ ಸಂದೇಶ ನೀಡುವರು. ಆರಾಧನೆಯ ಬಳಿಕ ವಿವಿಧ ಸ್ಫರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಿಎಸ್‌ಐ ಕೆ.ಎಸ್.ಡಿ ಧರ್ಮಾಧ್ಯಕ್ಷ ರೈಟ್. ರೆವ. ಹೇಮಚಂದ್ರ ಕುಮಾರ್, ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಭಾಗವಹಿಸುವರು.

ಉಡುಪಿ ಪ್ರಾದೇಶಿಕ ಪರಿಷತ್ತಿನ ವಲಯಾಧ್ಯಕ್ಷ ರೆವ. ಕಿಶೋರ್ ಕುಮಾರ್, ಉಪಾಧ್ಯಕ್ಷ ರೆವ. ಎಡ್ವಿನ್ ಜೋಸೆಫ್, ಕಾರ್ಯದರ್ಶಿ ಸಿರಿಲ್ ಸೋನ್ಸ್, ಖಜಾಂಚಿ ಡೇನಿಯೇಲ್ ಅಮ್ಮನ್ನ, ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಕಾರ್ಯಕ್ರಮ ಸಮಿತಿಯ ಹೆಬ್ರಿಯ ಸಿಎಸ್‌ಐ ಇಮ್ಮಾನುವೇಲ್ ದೇವಾಲಯದ ರೆವ. ಕಿಶೋರ್ ಕುಮಾರ್, ಸಹ ಸಭಾಪಾಲಕ ರೆವ. ನವೀನ್ ಆರ್ ಕೋಟ್ಯಾನ್, ಸಂಚಾಲಕ ಸೆಬ್ಬಾಸ್ಟಿನ್ ಎಸ್ ಕೋಟ್ಯಾನ್, ಖಜಾಂಚಿ ಫ್ಲಾವ್ಯ ಅಂಬ್ಲರ್ ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಕಾರ್ಯಕ್ರಮಕ್ಕೆ ಸಹಕರಿಸುವರು. ವಲಯ ಕಾರ್ಯಕಾರಿ ಮಂಡಳಿ ಉಡುಪಿ ಪ್ರಾದೇಶಿಕ ಪರಿಷತ್ತು, ಸ್ಥಳೀಯ ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಸಮಿತಿ, ಸಿಎಸ್‌ಐ ಇಮ್ಮಾನುವೇಲ್ ದೇವಾಲಯ ಹೆಬ್ರಿಯ ಸರ್ವ ಸದಸ್ಯರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.



