Thursday, September 24, 2026
Homeಹೆಬ್ರಿಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

ಉಡುಪಿ : ಉಡುಪಿ ಮಳಯಾಳಿಗಳ ಹೆಮ್ಮೆಯ ಪ್ರತಿಷ್ಠಿತ ಸಂಸ್ಥೆಯಾದ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ) ಉಡುಪಿ, ಸಂಸ್ಥೆಯು ಕೇರಳದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಉದ್ಯೋಗವನ್ನರಸುತ್ತಾ ಉಡುಪಿಗೆ ಬಂದು ನೆಲೆಸಿದ ಮಲೆಯಾಳಿಗಳು ಒಟ್ಟು ಸೇರಿ ಕಟ್ಟಿದ ಸಂಘಟನೆಯಾಗಿದೆ . ಕೆಸಿಎಸ್ ಸಿ. ಹಲವಾರು ದಶಕಗಳಿಂದ ಇಲ್ಲಿಯೇ ಇರುವುದರಿಂದ ಅವರ ಮಕ್ಕಳು ಮೊಮ್ಮಕ್ಕಳಿಗೆ ಮಲೆಯಾಳಕ್ಕಿಂತ ಹೆಚ್ಚು ಕನ್ನಡದ ಸಂಸ್ಕೃತಿಯ ಪರಿಚಯವೇ ಹೆಚ್ಚು. ಹುಟ್ಟೂರ ಮಣ್ಣಿನ ಸಂಸ್ಕೃತಿ , ಸಂಪ್ರದಾಯ ಹಾಗೂ ಜೀವನಕ್ರಮದ ಪರಿಚಯವನ್ನು ಮಕ್ಕಳಿಗೆ ಮಾತ್ರವಲ್ಕದೆ ತಾವು ಬದುಕುತ್ತಿರುವ ಪರಿಸರದಲ್ಲಿರುವ ಇತರರಿಗೂ ಪರಿಚಯಿಸುವ ಸದುದ್ದೇಶದಿಂದ ಈ ಸಂಘವು ಓಣಂ ಆಚರಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಕಳೆದ ೩೨ ವರ್ಷಗಳಿಂದ ಆಚರಿಸುತ್ತ ಬಂದಿದೆ.. ಈ ಬಾರಿಯೂ ಕೂಡ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ನ 32ನೆ ವಾರ್ಷಿಕೋತ್ಸವ ಹಾಗೂ
ಓಣಂ ಆಚರಣೆ ಸೆಪ್ಟೆಂಬರ್ 20 ರಂದು ವಿಜೃಂಭಣೆ ಯಿಂದ ನಡೆಯಲಿದೆ ಎಂದು ಕೆ ಸಿ ಎಸ್ ಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ ಪಾರ್ವತಿ ಐತಾಳ್ ತಿಳಿಸಿದರು

ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಅರೋಗ್ಯ ಸಚಿವ ಯು ಟಿ ಖಾದರ್ ಪರೀದ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ ಕೆ. ಐ ಎ ಎಸ್ , ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿ ಹರಿರಾಮ್ ಶಂಕರ್ ಐ ಪಿ ಎಸ್, ಮಾಹೆ ಹೆಲ್ತ್ ಸೈನ್ಸ್ ಪ್ರೊ ವೈಸ್ ಚಾನ್ಸೆಲ್ಲರ್ ಡಾ ಮಾತ್ಯುಸ್ ಜಾಕೋಬ್, ನೋರ್ಕ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಕೆ, ಕೇರಳ ಸಮಾಜo ಮಂಗಳೂರು ಅಧ್ಯಕ್ಷ ಟಿ ಕೆ ರಾಜನ್, ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್, ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ, ಕೋಶಾಧಿಕಾರಿ ಶಾಜಿ ವಿ ಕರುಣ್, ಕೆ ಸಿ ಎಸ್ ಸಿ ನಿಕಟ ಪೂರ್ವ ಅಧ್ಯಕ್ಷ ಸುಗುಣ ಕುಮಾರ್ ಎಂ ಜೆ ಎಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ

ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಪಿಲಿಪ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ ವಿನೋದ್ ವಿ ತೋಮಸ್, ಅರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಡಾ ರಾಜೇಶ್ ನಾಯರ್, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಎಂ ಎಲ್ ಜೋಸೆಫ್, ಕಲೆ ಸಂಸ್ಕೃತಿ ಕ್ಷೇತ್ರದಲ್ಲಿ ಸಿ ಸಾಧನೆಗೈದ ಲಿಯಾಕತ್ ಅಲಿ, ಯುವ ನ್ರತ್ಯಗಾತಿ ಸಾನ್ವಿ ರಾಜೇಶ್ ರವರಿಗೆ 2026ರ ಸಾಲಿನ ಕೆ ಸಿ ಎಸ್ ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಕೆ ಸಿ ಎಸ್ ಸಿ ಸದಸ್ಯರ ಕುಟುಂಬದ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ.
ಅಶಕ್ತರಿಗೆ ಧನ ಸಹಾಯ,  ಕೇರಳದಿಂದ ಇಲ್ಲಿಗೆ ಬಂದು ದಾರಿ ತಪ್ಪಿದವರನ್ನು ಊರಿನವರೊಂದಿಗೆ ಸೇರಿಸುವ ಸಹಾಯ ಮತ್ತು ಅಗತ್ಯ ಬಂದಾಗ ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಿದೆ.  ಮಲೆಯಾಳಂ ಮಿಶನ್ ಮೂಲಕ ಮಲೆಯಾಳ ಭಾಷೆಯನ್ನು ಕಲಿಸುವ ವ್ಯವಸ್ಥೆ, ಕೇರಳ ಸರಕಾರವು ಪರವೂರಿನಲ್ಲಿ ನೆಲೆಸಿದವರಿಗೆ ನೀಡುವ  ನೋರ್ಕಾ ಮೂಲಕ ನೀಡುವ ಹೆಲ್ತ್ ಇನ್ಶುರೆನ್ಸ್ ಅನ್ನು ಈ ಬಾರಿ ಸಂಘದ ಸದಸ್ಯರ ಕುಟುಂಬಗಳಿಗೆ
ಪಡೆಯುವ ವ್ಯವಸ್ಥೆಯನ್ನು ಸಂಘದ ಮುಖಂತರ ನೀಡುವ ವ್ಯವಸ್ಥೆ ಮಾಡಲಾಗುವುದು
ಎಪ್ಪತ್ತು ಮತ್ತು ಎಪ್ಪತ್ತಕ್ಕಿಂತ ಹೆಚ್ಚು ವಯಸ್ಸಾದ ಜತೆ ಜತೆಯಾಗಿ ಉಲ್ಲಾಸದಿಂದ ಬದುಕುವ ವ್ಯವಸ್ಥೆ ಮಾಡಲು “ಸೂಪರ್ ಸೆವೆಂಟಿ” ಎಂಬ ಒಂದು ಶಾಖೆಯನ್ನೂ
ಸಂಘವು ಸದಾ ಕಾಲ ಲವಲವಿಕೆಯಿಂದ ಕೂಡಿರಲು ಹಾಗೂ ನಮ್ಮ ಯುವ ಸಮುದಾಯ ಸಮಾಜ ಸೇವಾ ಚಟುವಟಿಕೆ
ತೊಡಗಿಸಿಕೊಳ್ಳಲು ಪೂರಕವಾಗಿ “ಯೂಥ್ ವಿಂಗ” ನ್ನು ಆರಂಭಿಸುತ್ತಿದೆ.

ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಕಲಾ ಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ನಡೆಯಲಿದೆ

ಕೆ ಸಿ ಎಸ್ ಸಿ ಕುಟುಂಬ ಸದಸ್ಯರಿಂದ ಸ್ವಾಗತ ನ್ರತ್ಯ, ಪುಷ್ಪಾoಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಟ್ಟo, ಫುಷನ್ ಡಾನ್ಸ್, ಕೊಯಿತು ಪಾಟ್ಟು ಡಾನ್ಸ್, ಕೈಕೊಟ್ಟಿಕಲಿ, ಮಹಾಭಾರತ ಥೀಮ್, ಸಿನೆಮಾಟಿಕ್ ಡಾನ್ಸ್ ನಡೆಯಲಿದೆ
ಕಾಲೇಜು ವಿದ್ಯಾರ್ಥಿನಿಯರಿಗಾಗಿ “ಅತ್ತಾಪೂಕಲಂ” ಹೂವಿನ ರಂಗೋಲಿ ಸ್ಪರ್ಧೆ ನಡೆಯಲಿದೆ

ಬೆಳಿಗ್ಗೆ 10.00ರಿಂದ 12.30 ರವರೆಗೆ ಮಿತ್ರ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ

ಮಧ್ಯಾಹ್ನ ಓಣo ಸದ್ಯ-ಅಂದರೆ ಕೇರಳದ ಅಪರೂಪದ ಖಾದ್ಯ ಪದಾರ್ಥಗಳ ಭರ್ಜರಿ ಭೋಜನವಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಕೆ ಸಿ ಎಸ್ ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್, ಕೆ ಸಿ ಎಸ್ ಸಿ
ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ ಆರ್, ಕೆ ಸಿ ಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ ಸಿ,ಕಾರ್ಯಕಾರಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!