Thursday, September 24, 2026
Homeಹೆಬ್ರಿಕಸ್ತೂರಿ ರಂಗನ್‌ವರದಿ : ಸಿಎಂ ನೇರ ಸಂವಾದ : ಕಿಕ್ಕಿರಿದು ಸೇರಿದ ಜನ !

ಕಸ್ತೂರಿ ರಂಗನ್‌ವರದಿ : ಸಿಎಂ ನೇರ ಸಂವಾದ : ಕಿಕ್ಕಿರಿದು ಸೇರಿದ ಜನ !

8 ಸಾವಿರ ಕ್ಕೂ ಹೆಚ್ಚು ಸೇರಿದ ಜನ: ಬದುಕಿನ ಹಕ್ಕಿಗಾಗಿ ಹಳ್ಳಿಹಳ್ಳಿಯಿಂದ ಬಸ್‌ ಕಾರುಗಳಲ್ಲಿ ಬಂದ ಜನ ಸಮೂಹ.

ಹೆಬ್ರಿ : ಕಸ್ತೂರಿ ರಂಗನ್‌ವರದಿಯ ಜನರ ಆತಂಕ ದೂರ ಮಾಡಲು ಸಿಎಂ ಡಿ.ಕೆ.ಶಿವಕುಮಾರ್‌ನಡೆಸಿದ ನೇರ ಸಂವಾದ ಕಾರ್ಯಕ್ರಮಕ್ಕೆ ವರದಿ ವ್ಯಾಪ್ತಿಯ ಜಿಲ್ಲೆಯ 35ಕ್ಕೂ ಹೆಚ್ಚು ವಿವಿಧ ಗ್ರಾಮಗಳು ಮತ್ತು ಇತರೆಡೆಗಳಿಂದ ೮ ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. ಮಧ್ಯಾಹ್ನ 12:30ರಿಂದಲೇ ಜನ ತಂಡತಂಡವಾಗಿ ಆಗಮಿಸುತ್ತಿದ್ದರು. ಜಿಲ್ಲಾಡಳಿತ ಮೂಲಕ 80 ಬಸ್‌ಗಳು, ಸರ್ಕಾರಿ ಬಸ್‌, ಖಾಸಗಿ ಬಸ್‌ಕಾರು ಸಹಿತ ಇತರ ವಾಹನಗಳಲ್ಲಿ ಜನ ಬಂದಿದ್ದರು. ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಾಧ್ಯಮಾ ಗ್ಯಾಲರಿಯೂ ಸಾರ್ವಜನಿಕರಿಂದ ಪುಲ್‌:

ಕಿಕ್ಕಿರಿದು ಸೇರಿದ ಜನರಿಂದಾಗಿ ಮಾಧ್ಯಮ ಗ್ಯಾಲರಿಯೂ ತುಂಬಿತ್ತು. ಮಾಧ್ಯಮ ಪ್ರತಿನಿಧಿಗಳಿಗೂ ಕುಳಿತುಕೊಳ್ಳಲು ಜಾಗವೇ ಇರಲಿಲ್ಲ.

6500 ಮಂದಿಗೆ ಊಟದ ವ್ಯವಸ್ಥೆ :

ಕಾರ್ಯಕ್ರಮದಲ್ಲಿ 6500 ಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 10ಕ್ಕೂ ಹೆಚ್ಚು ಕೌಂಟರ್‌ಮೂಲಕ ಅನ್ನ, ಪಲ್ಯ, ಸಾಂಬಾರ್‌, ಸಾರು, ಪಾಯಸ, ಮಜ್ಜಿಗೆ ಸೇರಿ ವಿಶೇಷ ಊಟ ನೀಡಲಾಯಿತು.

8 ಸಾವಿರ ಮಂದಿಗೆ ಪಾನೀಯ :

ಹೆಬ್ರಿಯ ಟ್ವಿಂಕಲ್‌ಅಗ್ರೋ ಕೇರ್ ವತಿಯಿಂದ ೮ ಸಾವಿರ ಮಂದಿಗೆ ಪಾನೀಯ, ಕುಡಿಯುವ ನೀರು ಮತ್ತು ಲಸ್ಸಿ ವ್ಯವಸ್ಥೆಯನ್ನು ಮಾಡಲಾಯಿತು. ‌

200ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ :

ಕಸ್ತೂರಿರಂಗನ್‌ವರದಿ ಸಮಸ್ಯೆಯಿಂದ ದೂರ ಮಾಡುವುದು ಸೇರಿ ವಿವಿಧ ಅಭಿವೃದ್ಧಿ ಯೋಜನೆಯ ಬಗ್ಗೆ 200ಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.
ಕಸ್ತೂರಿರಂಗನ್‌ವರದಿಯ ಆತಂಕದಿಂದ ದೂರ ಮಾಡಲು ೫ ಸಾವಿರ ಮಂದಿ ಸಹಿ ಮಾಡಿದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಮತ್ತು ಕಾಂಗ್ರೆಸ್‌ನಾಯಕರು ಮುಖ್ಯಮಂತ್ರಿಯವರನ್ನು ಹೆಲಿಪ್ಯಾಡ್‌ನಲ್ಲಿ ಸ್ವಾಗತಿಸಿದರು.

ನಾರಾಯಣಗುರುಗಳ ಪ್ರತಿಮೆ ನೀಡಿ ಗೌರವ .

ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿಯವರು ಮುಖ್ಯಮಂತ್ರಿಯವರನ್ನು ನಾರಾಯಣಗುರು ಪ್ರತಿಮೆ ನೀಡಿ ವಿಶೇಷವಾಗಿ ಗೌರವಿಸಿದರು.

ಕೊರಗ ಸಮುದಾಯದ ಮುಖಂಡೆ ಸುಶೀಲ ನಾಡ ನೇತ್ರತ್ವದಲ್ಲಿ ಗೌರವಿಸಿದರು. ಹೆಲಿಪ್ಯಾಡ್‌ಗೆ ಸಗಣಿ ಸಾರಿಸಿ ದೂಳು ಏಳದಂತೆ ಮಾಡಲಾಗಿದ್ದು ವಿಶೇಷವಾಗಿತ್ತು.

ಕಸ್ತೂರಿ ರಂಗನ್‌ವರದಿ : ಸಿಎಂ ನೇರ ಸಂವಾದ : ಕಿಕ್ಕಿರಿದು ಸೇರಿದ ಜನ !

ಗಣೇಶೋತ್ಸವ ಹಿನ್ನಲೆಯಲ್ಲಿ ಪೊಲೀಸ್‌ಅಧಿಕಾರಿಗಳು ಸೇರಿ ಕೇವಲ 500 ಮಂದಿ ಪೊಲೀಸ್‌ಸಿಬ್ಬಂದಿಗಳಿಂದ ಉಡುಪಿ ಎಸ್‌ಪಿ ಹರಿರಾಮ್‌ ಶಂಕರ್‌ ನೇತ್ರತ್ವದಲ್ಲಿ ಬಂದೋಬಸ್ತ್‌ಮಾಡಿರುವುದು ವಿಶೇಷವಾಗಿತ್ತು.
ಮುಖ್ಯಂತ್ರಿಗಳಿಗೆ ಮನವಿ ಮನವಿ ಸಲ್ಲಿಸಲು ಜನ ಮುಗಿಬೀಳುತ್ತಿದ್ದಾಗ ಮುಖ್ಯಮಂತ್ರಿಯವರೇ ಓಡೋಡಿ ಬಂದು ಮನವಿ ಸ್ವೀಕರಿಸಿದರು. ಪಕ್ಷಭೇದ ಮರೆತು ಜನ ಸೇರಿದ್ದರು. ಹೆಬ್ರಿಗೆ ಹೆಲಿಕಾಷ್ಟರ್‌ನಲ್ಲಿ ಹೆಬ್ರಿ ಆಗಮಿಸಿದ 2ನೇ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಾಣವಾಗಿದೆ. ಇದೇ ಕಾಲೇಜಿನ ಮೈದಾನದಲ್ಲಿ ಅಂದು ಇಂದಿರಾ ಗಾಂಧಿ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದರು.

ರೈತರ ಘೋಷಣೆಗೆ ಬಗ್ಗಿದ ಸಿಎಂ : ಬೈಂದೂರಿನಲ್ಲಿ 403 ದಿವಸಗಳಿಂದ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶವನ್ನು ಸೇರಿಸಬಾರದೆಂದು ಪ್ರತಿಭಟನೆ ನಡೆಯುತ್ತಿದೆ. ಇಂದಿನ ಹೆಬ್ರಿಯ ಮುಖ್ಯಮಂತ್ರಿ ಸಭೆಗೆ 1500 ಮಂದಿ ರೈತರು ನಮ್ಮ ಸಮಸ್ಯೆಯನ್ನು ಆಲಿಸುವಂತೆ ಘೋಷಣೆ ಕೂಗಿದಾಗ, ಹೊರಡಲು ಸಿದ್ಧವಾಗಿದ್ದ ಸಿಎಂ ಮರಳಿ ಬಂದು ರೈತರ ಸಮಸ್ಯೆಯನ್ನು ಆಲಿಸಿ, ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಬಗೆಹರಿಸುತ್ತೇನೆ ಎಂದು ತಿಳಿಸಿ, ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಪುಪ್ಪಾರ್ಚನೆ ಮಾಡಿ ಆರತಿ ಬೆಳಗಿ ಸಿಎಂಗೆ ಹೆಬ್ರಿ ಮಹಿಳಾ ಮಣಿಗಳ ಸ್ವಾಗತ…
ಮಂಗಳೂರು ಸಂಪುಟ ಸಭೆ ಮುಗಿಸಿ ಹೆಲಿಕಾಷ್ಟರ್‌ ಮೂಲಕ ಹೆಬ್ರಿಗೆ ಆಗಮಿಸಿದ ಸಿಎಂ ಡಿಕೆಶಿ ಅವರನ್ನು ಮಹಿಳಾ ಕಾಂಗ್ರೆಸ್‌ ನ ಹೆಬ್ರಿಯ ಸುಮ ಎನ್‌ ಅಡ್ಯಂತಾಯ, ಸುಮಿತ್ರ ನಾಯ್ಕ್‌ ಶಿವಪುರ, ಸುಮಿತ್ರಾ ಹೆಗ್ಡೆ ಹೆಬ್ರಿ, ರಂಜನಿ ಹೆಬ್ಬಾರ್‌, ಭಾನು ಭಾಸ್ಕರ್‌, ವೀಣಾ ಶೆಟ್ಟಿ, ಶಶಿಕಲಾ ಡಿ.ಪೂಜಾರಿ ಸೇರಿ ಹಲವರು ಪುಪ್ಪಾರ್ಚನೆ ಮಾಡಿ ಆರತಿ ಬೆಳಗಿ ಸಾಂಪ್ರಾದಾಯಿಕ ಸ್ವಾಗತ ನೀಡಿದರು. ಹರ್ಷಗೊಂಡ ಸಿಎಂ ನಗೆ ಬೀರಿ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮೊದಲು ಮುಖ್ಯಮಂತ್ರಿಯವರಿಗೆ ಪೊಲೀಸ್‌ ಗೌರವ ರಕ್ಷೆಯ ವಿಶೇಷ ಗೌರವ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!