ಹೆಬ್ರಿ : ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ಆಶ್ರಯದಲ್ಲಿ ಸ್ವೀಪ್ ಚಟುವಟಿಕೆಯಾಗಿ ಮತದಾರರ ನೋಂದಣಿ ಹಾಗೂ ಸರಪಳಿ ಜಾಗೃತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ರಂದು ಹಮ್ಮಿಕೊಳ್ಳಲಾಯಿತು.
ಹೆಬ್ರಿ ತಾಲ್ಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿನೇಶ್ ಡಿ ಇ. ಮಾತನಾಡಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ರಾಷ್ಟ್ರದ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯಲ್ಲಿ ಮತದಾರರ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಅತ್ಯಂತ ಪ್ರಮುಖವಾದುದು, ಈ ನಿಟ್ಟಿನಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ತನ್ನನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವ ಹಾಗೂ ಚುನಾವಣೆಯಲ್ಲಿ ಮತದಾನ ಮಾಡುವ ಪ್ರಮುಖ ಜವಾಬ್ದಾರಿ ಇದೆ ಎಂಬುದಾಗಿ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್ ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಅನುವು ಮಾಡಿಕೊಡುವುದಾಗಿ ತಿಳಿಸಿದರು.
ಹೆಬ್ರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಸುಷ್ಮಾ ರಾವ್ ಕೆ,, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಗಳು, ಕಾಲೇಜು ಕ್ಯಾಂಪಸ್ ರಾಯಭಾರಿಗಳಾದ ಹರೀಶ್ ಕುಮಾರ್ ಎಚ್ ತೃತೀಯ ಬಿಎ ಹಾಗೂ ಪ್ರಥಮ್ ದ್ವಿತೀಯ ಬಿಎ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಅಶ್ವಥ್ ತೃತೀಯ ಬಿಎ, ಉಪಾಧ್ಯಕ್ಷ ಸ್ವಸ್ತಿಕ್ ದ್ವಿತೀಯ ಬಿಕಾಂ, ಕಾರ್ಯದರ್ಶಿ ಮಂಜುನಾಥ ದ್ವಿತೀಯ ಬಿಎ, ಜಂಟಿ ಕಾರ್ಯದರ್ಶಿ ಶೈಲೇಶ್ ದ್ವಿತೀಯ ಬಿಕಾಂ , ಸದಸ್ಯರಾದ ತೃತೀಯ ಬಿಕಾಂ ಸನತ್ ಹಾಗೂ ಕು. ಮಾನಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕಿ ಜ್ಯೋತಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಸ್ವಾಗತಿಸಿದರು, ತೃತೀಯ ವರ್ಷದ ವಿದ್ಯಾರ್ಥಿನಿಯರಾದ ದೀಕ್ಷಿತ ವಂದಿಸಿದರು, ಐಶ್ವರ್ಯ ಪ್ರಾರ್ಥಿಸಿದರು, ಕು. ಪ್ರಜ್ಞಾ ನಿರೂಪಿಸಿದರು.





