ಕಂಪ್ಯೂಟರ್ ಕಲಿಕೆ ಇಂದಿನ ಅಗತ್ಯ” ಪ್ರಸಾದ್ ಕುಮಾರ್
ಸಿದ್ಧಾಪುರ : ಸಿದ್ಧಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನೀಡಿದ ೩ ಕಂಪ್ಯೂಟರ್ ಹಾಗೂ ೧ ಪ್ರಿಂಟರ್ ಹಸ್ತಾಂತರಿಸಲಾಯಿತು.
ಮಂಗಳೂರು ವಲಯದ ಸಿಎಸ್ಆರ್ ಯೋಜನೆಯ ಮುಖ್ಯಸ್ಥ ಪ್ರಸಾದ್ ಕುಮಾರ್ ಅವರು ಮುಖ್ಯ ಶಿಕ್ಷಕ ಸೋಮ ನಾಯಕ್ ಮತ್ತು ಎಸ್ಡಿಎಂಸಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಉಡುಪಿ ಕ್ಲಸ್ಟರ್ನ ಮುಖ್ಯಸ್ಥ ನೆಲ್ಸನ್ ಡಿಸೋಜ ಅವರನ್ನು ಸಂಪಿಗೆಡಿ ಸಂಜೀವ ಶೆಟ್ಟಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಮುತ್ತೂಟ್ ಫೈನಾನ್ಸ್ನ ಪ್ರವೀಣ್ ಪ್ರಾಂಕ್, ಮುತ್ತೂಟ್ ಫೈನಾನ್ಸ್ ಸಿದ್ದಾಪುರ ಶಾಖೆಯ ಮುಖ್ಯಸ್ಥ ಸಂದೀಪ್ ಖಾರ್ವಿ ಉಪಸ್ಥಿತರಿದ್ದರು.
ಶಾಲಾ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ ಶಾಲೆಯ ಉತ್ತರೋತ್ತರ ಪ್ರಗತಿಯನ್ನು ಕೊಂಡಾಡಿದರು. ಈ ಎಲ್ಲಾ ಪ್ರಗತಿಗೆ ಕಾರಣೀಕರ್ತರಾದ ವಾರ್ಷಿಕೋತ್ಸವ ಸಮಿತಿ ಮತ್ತು ಎಸ್ಡಿಎಂಸಿಯನ್ನು ಅಭಿನಂದಿಸಿದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅವರು ಸಿಎಸ್ಆರ್ ಸಹಾಯಧನವನ್ನು ಶಾಲೆಗೆ ತಂದ ಬಗೆಯನ್ನು ವಿವರಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವ ಸಮಿತಿಯ ಖಜಾಂಚಿ ಗಣೇಶ್ ಶೇಟ್, ಕಾರ್ಯದರ್ಶಿ ಸತ್ಯನಾಥ ಆಚಾರ್ಯ, ಸರ್ಕಾರಿ ಪ್ರೌಢಶಾಲೆಯ ಉದಯ್ ಬಳಗಾರ್, ಗೋಪಾಲ್ ಕಾಂಚನ್, ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು. ಸೋಮ ನಾಯ್ಕ್ ಸ್ವಾಗತಿಸಿದರು. ಶ್ರೀಧರ್ ಎಸ್ ಸಿದ್ದಾಪುರ ನಿರೂಪಿಸಿದರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಂದರ್ ನಾಯ್ಕ ವಂದಿಸಿದರು.




