Sunday, October 18, 2026
Homeಶಿವಪುರ ಗ್ರಾಮ ಪಂಚಾಯತ್‌ಶಿವಪುರ : ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ವೀಕ್ಷಣೆ.

ಶಿವಪುರ : ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ವೀಕ್ಷಣೆ.

ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಿ – ಸಂಸದ ಕೋಟ ಸೂಚನೆ.

ಹೆದ್ದಾರಿಗೆ ಜಾಗ ಕೊಟ್ಟವರ ಸಮಸ್ಯೆ ಶೀಘ್ರ ಬಗೆಹರಿಸಿ ಜಿಲ್ಲಾಧಿಕಾರಿಗೆ ಸೂಚನೆ.

ಶಿವಪುರ  : ಹಲವು ದಿನಗಳಿಂದ ನೆನಗುದ್ದಿಗೆಗೆ ಬಿದ್ದಿರುವ ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯತ್ ಕಡೆಯಿಂದ ಸುಮಾರು 1 ಕೀಮಿ ದೂರದ ಸೇತುವೆ ಸಹಿತ ಹೆದ್ದಾರಿಯ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಹೆಬ್ರಿ ಉಡುಪಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಶಿವಪುರದ ಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷೀಸಿದರು.

ಪೆರ್ಡೂರು ಪಾಡಿಗಾರ ವ್ಯಾಪ್ತಿಯ ಸುಮಾರು 1.3 ಕೀಮಿ ಅರಣ್ಯದಲ್ಲಿರುವ ಮರಗಳನ್ನು ತೆರವು ಕಾರ್ಯಾಚರಣೆ ಪರಿಶೀಲಿಸಿದ ಸಂಸದರು ಈಗಾಗಲೇ ಅರಣ್ಯ ಇಲಾಖೆ ಅನುಮತಿ ನೀಡಿರುವುದರಿಂದ ಕಾಮಗಾರಿಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಶಿವಪುರದ ಮೂರ್ಸಾಲು ಮೋಹನದಾಸ ನಾಯಕ್‌, ವಸಂತ ವಾಗ್ಲೆ ಅವರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಬಳಿಕ ಆತ್ರಾಡಿ ಪರಿಸರದ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಶೇಷ ತಿರುವು ನೀಡಲು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಮಂಜನ ಗೌಡ, ನವೀನ್, ಶಶಿಧರ್, ಶಿವಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಹೆಬ್ರಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ, ಪ್ರಮುಖರಾದ ಶಂಕರ ಬಡ್ಕಿಲ್ಲಾಯ, ಶೇಖರ ಶೆಟ್ಟಿ ಕೆರೆಬೆಟ್ಟು, ಮೂರ್ಸಾಲು ಮೋಹನದಾಸ ನಾಯಕ್‌, ಜಗನ್ನಾಥ ಕುಲಾಲ್‌,ರಾಘವೇಂದ್ರ ಪೂಜಾರಿ, ರತ್ನಾಕರ ಶೆಟ್ಟಿ ಆತ್ರಾಡಿ, ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!