ಜನ್ಮಭೂಮಿ ಕ್ರಿಕೆಟ್ ಅಕಾಡಮೆ ಸೀತಾನದಿ ಇವರ ಆಶ್ರಯದಲ್ಲಿ 6 ರಿಂದ 18 ವರ್ಷ ವಯೋಮಿತಿಯ ಬಾಲಕ – ಬಾಲಕಿಯರಿಗಾಗಿ ದಸರಾ ರಜೆಯಲ್ಲಿ ದಿನಾಂಕ 11 – 10 – 2026 ಭಾನುವಾರದಿಂದ ದಿನಾಂಕ 21 – 10 – 2026 ರವರೆಗೆ ಹಾರ್ಡ್ ಬಾಲ್ ಕ್ರಿಕೆಟ್ ತರಬೇತಿ ಶಿರವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಸಮ್ಮರ್ ಕೋಚಿಂಗ್ ಕ್ಯಾಂಪ್ ಮತ್ತು ವೀಕೆಂಡ್ ಕೋಚಿಂಗ್ ಕ್ಯಾಂಪನ್ನು ಯಶಸ್ವಿಯಾಗಿ ಮುಗಿಸಿಕೊಂಡು ಇದರಲ್ಲಿ ಸುಮಾರು 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿರುವುದು ಅಕಾಡೆಮಿಯ ಹೆಮ್ಮೆ. ಈ ಕ್ಯಾಂಪ್ ನ ಯಶಸ್ವಿಯೊಂದಿಗೆ ನಮ್ಮ ಮುಂದಿನ ಯೋಜನೆ ಯಂತೆ ದಸರಾ ರಜೆಯ ಕ್ಯಾಂಪನ್ನು ಆರಂಭಿಸುತ್ತಿದ್ದೇವೆ.
ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಆಡಲು ಬೇಕಾಗಿರುವ ಎಲ್ಲಾ ಕ್ರೀಡಾ ಪರಿಕರಗಳನ್ನು ಅಕಾಡೆಮಿ ವತಿಯಿಂದಲೇ ಒದಗಿಸುವುದು ಅಕಾಡೆಮಿಯ ವಿಶೇಷವಾಗಿರುತ್ತದೆ.
ಸಮ್ಮರ್ ಕ್ಯಾಂಪನ್ನು ಮೆಂಬರ್ ಶಿಪ್ ಶುಲ್ಕವನ್ನು ಹೊರತುಪಡಿಸಿ ತರಬೇತಿಯನ್ನು ಉಚಿತ ವಾಗಿ ನಡೆಸಲಾಗಿತ್ತು .ವೀಕೆಂಡ್ ಕ್ಯಾಂಪನ್ನು ಉಚಿತವಾಗಿ ನಡೆಸಿದ್ದು ಪಿಚ್ ಮೆಂಟೈನ್ ಗಾಗಿ ಮಾತ್ರ ಶುಲ್ಕವನ್ನು ಪಡೆಯಲಾಗಿತ್ತು.
ದಸರಾ ರಜೆಯ ಕ್ಯಾಂಪನ್ನು ಕೂಡ ತರಬೇತಿಯನ್ನು ಉಚಿತವಾಗಿ ನಡೆಸುತ್ತಿದ್ದು ಹೊಸದಾಗಿ ಸೇರುವವರಿಗೆ ಮೆಂಬರ್ ಶಿಪ್ ಶುಲ್ಕದೊಂದಿಗೆ ಪಿಚ್ ಮೆಂಟೈನ್ ಶುಲ್ಕ ವನ್ನು ಮಾತ್ರ ಸ್ವೀಕರಿಸಲಾಗುವುದು.
ದಸರಾ ರಜೆಯ ತರಬೇತಿ ಶಿಬಿರದ ನಂತರ ನಮ್ಮ ಮುಂದಿನ ಯೋಜನೆಯಂತೆ ನಾವು ನವಂಬರ್ 1 ರಿಂದ ರೆಗ್ಯುಲರ್ ರಾಗಿ ದಿನಂಪ್ರತಿ ಕ್ರಿಕೆಟ್ ತರಬೇತಿ ಶಿಬಿರವನ್ನು ಆರಂಭಿಸುತಿದ್ದೇವೆ.
ಜನವರಿ 26 ರಿಂದ ನಮ್ಮ ಅಕಾಡೆಮಿಯ ಆಶ್ರಯದಲ್ಲಿ ರಾಜ್ಯ ಮಟ್ಟದ ಬಾಲಕ ಬಾಲಕಿಯರ ಅಂತರ್ ಶಾಲಾ ಮತ್ತು ಅಂತರ್ ಕ್ಲಬ್ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸೀತಾನದಿ ಸತೀಶ್ ಶೆಟ್ಟಿ
8762724491
ಇವರನ್ನು ಸಂಪರ್ಕಿಸಬವುದು.



