ಹೆಬ್ರಿ : ಸರ್ಕಾರ ತುಳು ಭಾಷೆಗೆ ಅಧೀಕೃತ ಮಾನ್ಯತೆಯನ್ನು ನೀಡಿ ರಾಜ್ಯದ 2ನೇ ಭಾಷೆಯಾಗಿ ಘೋಷಣೆ ಮಾಡಿರುವುದು ನಮಗೆಲ್ಲ ಅತ್ಯಂತ ಸಂತೋಷವಾಗಿದೆ. ಅದಕ್ಕಾಗಿ ವಿಶ್ವ ತುಳುವ ಮಹಾಸಭಾ ನಿರಂತರವಾಗಿ ಶ್ರಮಿಸಿದೆ. ಕನ್ನಡ ಜೊತೆಗೆ ನಾವು ತುಳುವನ್ನು ಇನ್ನಷ್ಟು ಬೆಳೆಸಬೇಕು, ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು, ತುಳು ಭಾಷೆ ನಮ್ಮ ಹೆಮ್ಮೆ, ವಿಶ್ವ ತುಳುವ ಮಹಾಸಭಾ ತುಳು ಭಾಷೆ, ಸಂಸ್ಕೃತಿಗಾಗಿ ವಿಶ್ವದಾದ್ಯಂತ ಸೇವೆ ಮಾಡುತ್ತಿದೆ. ತುಳುವಿಗಾಗಿ ಅಂದು ಸ್ಥಾಪಿಸಿದ ವಿಶ್ವ ತುಳುವ ಮಹಾಸಭಾ 2028ಕ್ಕೆ ಶತಮಾನೋತ್ಸವ ಸಂಭ್ರಮವನ್ನು ಕಾಣುತ್ತಿದೆ. ಉಡುಪಿಯಲ್ಲಿ ಶತಮಾನೋತ್ಸವ ಸಂಭ್ರಮ ನಡೆಯಲಿದೆ. ಎಲ್ಲರೂ ಸೇರಿ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿಶ್ವ ತುಳುವ ಮಹಾಸಭೆಯ ಅಂತರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಶುಕ್ರವಾರ ನಡೆದ ವಿಶ್ವ ತುಳುವ ಮಹಾಸಭಾ ಹೆಬ್ರಿ ವಲಯ ಸಮಿತಿ ರಚನೆಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವದ ೧೯ ರಾಷ್ಟ್ರದಲ್ಲಿ ವಿಶ್ವ ತುಳುವ ಮಹಾಸಭಾ ಘಟಕಗಳಿವೆ, ಎಲ್ಲಾ ಘಟಕಗಳು ತುಳುವಿಗಾಗಿ ನಿರಂತರ ಸೇವೆಯನ್ನು ಮಾಡುತ್ತಿದೆ. ಈಗ ನಮಗೆ ಇನ್ನಷ್ಟು ಶಕ್ತಿ ಬಂದಿದೆ, ಎಲ್ಲರೂ ತುಳುವಿಗಾಗಿ ತಮ್ಮ ಸೇವೆಯನ್ನು ನೀಡಬೇಕಿದೆ, ತುಳು ಎಂದರೆ ಅದು ಕೇವಲ ಭಾಷೆಯಲ್ಲ, ತುಳು ನಮ್ಮ ಬುದುಕು ಎಂದು ಸರ್ವೋತ್ತಮ ಶೆಟ್ಟಿ ಹೇಳಿದರು.

ವಿಶ್ವ ತುಳುವ ಮಹಾಸಭಾ ಉಡುಪಿ ಜಿಲ್ಲಾಧ್ಯಕ್ಷ ಬೈಲೂರು ಉದಯ ಕುಮಾರ್ ಹೆಗ್ಡೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ವಿಶ್ವ ತುಳುವ ಮಹಾಸಭಾ ವಲಯ ಸಮಿತಿಯನ್ನು ರಚಿಸಿ ಬಲಪಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಶ್ವ ತುಳುವ ಮಹಾಸಭಾ ನಿರ್ದೇಶಕ ಡಾ. ರಾಜೇಶ್ ಆಳ್ವ ಮಾತನಾಡಿ ತುಳು ಭಾಷೆಯ ಆಳ, ಸಂಸ್ಕೃತಿ, ತುಳುವ ಮಹಾಸಭಾದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ತುಳುವ ಫೌಂಡೇಶನ್ ಇಂಟರ್ ನ್ಯಾಶನಲ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ, ಕುತ್ತೆತ್ತೂರು, ಜಿಲ್ಲಾ ಸಂಚಾಲಕ ವಿಶ್ವನಾಥ ಆಚಾರ್ಯ ಪೆರ್ಡೂರು, ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಉಪಸ್ಥಿತರಿದ್ದರು.

ಹೆಬ್ರಿಯ ಪ್ರಮುಖರಾದ ಹೆಬ್ರಿ ಟಿ.ಜಿ. ಆಚಾರ್ಯ, ನವೀನ್ ಕೆ ಅಡ್ಯಂತಾಯ, ಹರಿದಾಸ ಹೆಗ್ಡೆ ಹೆಬ್ರಿ, ಹೆಬ್ರಿ ನರೇಂದ್ರ ನಾಯಕ್, ಸೀತಾನದಿ ನಾಗೇಶ ನಾಯಕ್, ಎಸ್.ಟಿ.ಶೆಟ್ಟಿಗಾರ್ ಮುದ್ರಾಡಿ, ಬಾಲಚಂದ್ರ ಮುದ್ರಾಡಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ ಚಾರ, ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ, ವಿಠ್ಠಲ ಶೆಟ್ಟಿ ಸೀತಾನದಿ, ಸುಂದರ ಹೆಗ್ಡೆ ಹೆಬ್ರಿ, ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ, ಶಂಕರ ಶೇರಿಗಾರ್ ಹೆಬ್ರಿ, ರಮೇಶ ಪೂಜಾರಿ ಶಿವಪುರ, ಹರೀಶ ಶೆಟ್ಟಿ ನಾಡ್ಪಾಲು, ಬೇಳಂಜೆ ಹರೀಶ ಪೂಜಾರಿ, ಪ್ರವೀಣ್ ಹೆಗ್ಡೆ ಹೆಬ್ರಿ, ವಕೀಲ ಕೃಷ್ಣ ಶೆಟ್ಟಿ ಹೆಬ್ರಿ, ಲಕ್ಷ್ಮಣ ಆಚಾರ್ ವರಂಗ, ಪತ್ರಕರ್ತ ಸುಕುಮಾರ್ ಮುನಿಯಾಲ್ ಮುಂತಾದವರು ಭಾಗವಹಿಸಿದ್ದರು.



