ಯಕ್ಷಗಾನ ತರಭೇತಿಯನ್ನು ಉದ್ಘಾಟಿಸಿದ ಪಡುಪರ್ಕಳ ಹರೀಶ್ ಶೆಟ್ಟಿ.
ಪಡುಕುಡೂರು (ಹೆಬ್ರಿ ) : ಶತಮಾನೋತ್ಸವ ಸಂಭ್ರಮದಲ್ಲಿರುವ ಹೆಬ್ರಿ ತಾಲ್ಲೂಕಿನ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿಧ್ಯಾರ್ಥಿಗಳ ತಂಡದ ಯಕ್ಷಗಾನ ತರಭೇತಿಯನ್ನು ಮುಂಬೈ ಉದ್ಯಮಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಹರೀಶ್ ಶೆಟ್ಟಿ ಪಡುಪರ್ಕಳ ಉದ್ಘಾಟಿಸಿ ಶುಭಹಾರೈಸಿದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಗುರು ತೆಂಕುತಿಟ್ಟು ಯಕ್ಷರಂಗದಲ್ಲಿ 43 ವರ್ಷಗಳ ಅನುಭವದ ಸತೀಶ್ ಮಡಿವಾಳ,
ನಾರಾಯಣ ಆಚಾರ್ಯ ಗರ್ಧರಬೆಟ್ಟು ಮತ್ತು ಸಂತೋಷ ಶೆಟ್ಟಿ ನೇತ್ರತ್ವದಲ್ಲಿ ಯಕ್ಷಗಾನ ತಂಡವನ್ನು ರಚಿಸಲಾಯಿತು.
ಶತಮಾನೋತ್ಸವ ಸಮಿತಿಯಯ ಸಂಚಾಲಕ ಪ್ರಸನ್ನ ಶೆಟ್ಟಿ ಜಯಲೀಲಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ.ಎಸ್, ಪ್ರಮುಖರಾದ ಸಂತೋಷ ಆಚಾರ್ಯ, ಶೃತಿ ಪೂಜಾರಿ, ಸವಿತಾ ಶೆಟ್ಟಿ, ಸಂತೋಷ ಶೆಟ್ಟಿ, ನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಾದ ದೀಕ್ಷಾ,ಅವಿನಾಶ್,ಸಮೃದ್ಧಿ, ಆಯುಷಿ,ಅದಿತಿ ಪ್ರಾರ್ಥಿಸಿದರು. ಹರೀಶ ಪೂಜಾರಿ ಎಸ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.



