ಕುಚ್ಚೂರು : ಹೆಬ್ರಿಯ ಕುಚ್ಚೂರು ಕಾನ್ಬೆಟ್ಟು ದುರ್ಗಾ ಫ್ರೆಂಡ್ಸ್ ಸಂಘದ ಸದಸ್ಯರಾಗಿದ್ದ ಶ್ರೀಧರ ಶೆಟ್ಟಿ ಅವರು ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದ ಅವರಿಗೆ ಇರುವ ೨ ಜನ ಹೆಣ್ಣು ಮಕ್ಕಳಲ್ಲಿ ದೊಡ್ಡ ಮಗಳು ವಿಕಲಚೇತನಳಾಗಿದ್ದು ಅವರ ಕುಟುಂಬಕ್ಕೆ ಇತ್ತೀಚೆಗೆ ಕುಚ್ಚೂರು ಕಾನ್ಬೆಟ್ಟು ದುರ್ಗಾ ಫ್ರೆಂಡ್ಸ್ ಸಂಘದಿಂದ 50,000 ಸಹಾಯಧನ ನೀಡಲಾಯಿತು.
ಕುಚ್ಚೂರು ಕಾನ್ಬೆಟ್ಟು ದುರ್ಗಾ ಫ್ರೆಂಡ್ಸ್ ಅಧ್ಯಕ್ಷರಾದ ಮಹೇಶ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಸದಸ್ಯರಾದ ಸದಾಶಿವ ಶೆಟ್ಟಿ ಮೇಲ್ಮನೆ, ಚಂದ್ರಶೇಖರ ಶೆಟ್ಟಿ ಕಾಸನಕೊಡ್ಲು, ದೀಕ್ಷಿತ್ ನಾಯ್ಕ್ ಕಾನ್ಬೆಟ್ಟು, ಪ್ರಜೇಶ್ ಶೆಟ್ಟಿ ಕಾನ್ಬೆಟ್ಟು, ಬ್ರಿಜೇಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಕೆಳಮನೆ, ಭರತ್ ಶೆಟ್ಟಿ ಕಾನ್ಬೆಟ್ಟು ಮುಂತಾದವರು ಉಪಸ್ಥಿತರಿದ್ದರು.



