ಹೆಬ್ರಿ : ಹೆಬ್ರಿಯ ಏಕದಂತ ಇವೆಂಟ್ಸ್ ನ ಹೆಬ್ರಿ ಸಂದೀಪ್ ಆಚಾರ್ಯ ಅವರು ಥರ್ಮಾಕೋಲ್ ಮತ್ತು ಬೋರ್ಡ್ ನಲ್ಲಿ ತಯಾರಿಸಿದ ಉಚ್ಚಿಲ ದೇವಸ್ಥಾನದ ಕಲಾಕೃತಿ ಸರ್ವರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ.

ಉಚ್ಚಿಲ ದೇವಸ್ಥಾನಕ್ಕೆ ತಕ್ಕಂತೆ ಮಾಡಿದ ಲೈಟಿಂಗ್ಸ್ ಗಮನ ಸೆಳೆದಿದೆ.
ಜನಾಕರ್ಷಣೆಯ ಕೇಂದ್ರಬಿಂದುವಾದ ಉಚ್ಚಿಲ ಕಲಾಕೃತಿ ಬಗ್ಗೆ ಸಂದೀಪ್ ಆಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ಕಲಾವಿದರಾದ ಹೆಬ್ರಿಯ ಏಕದಂತ ಇವೆಂಟ್ಸ್ ನ ಹೆಬ್ರಿ ಸಂದೀಪ್ ಆಚಾರ್ಯ ಅವರನ್ನು ಗೌರವಿಸಲಾಯಿತು.




