Tuesday, October 20, 2026
Homeಹೆಬ್ರಿ ಗ್ರಾಮ ಪಂಚಾಯತ್‌ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ಶಾಖೆ " ಹೃದಯ ತಪಾಸಣಾ ಉಚಿತ ಶಿಬಿರ...

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ಶಾಖೆ ” ಹೃದಯ ತಪಾಸಣಾ ಉಚಿತ ಶಿಬಿರ “

ಹೆಬ್ರಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹೆಬ್ರಿ ತಾಲ್ಲೂಕು ಶಾಖೆ, ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಅಲಯನ್ಸ್ ಕ್ಲಬ್ ಹೆಬ್ರಿ ಇವರ ಸಹಯೋಗದಲ್ಲಿ ” ಹೃದಯ ತಪಾಸಣೆ ಮತ್ತು ಆರೋಗ್ಯ ತಪಾಸಣಾ ಉಚಿತ ಶಿಬಿರ” ಶನಿವಾರ ಹೆಬ್ರಿ ಶ್ರೀ ರಾಘವೇಂದ್ರ ಆಸ್ಪತ್ರೆಯಲ್ಲಿ ನಡೆಯಿತು. ಶಿಬಿರದಲ್ಲಿ ಉಚಿತವಾಗಿ ಹೃದಯ ತಪಾಸಣೆ, ಯಕೃತ್ ತಪಾಸಣೆ, ಮಧುಮೇಹ ತಪಾಸಣೆ, ರಕ್ತದೊತ್ತಡ ತಪಾಸಣೆ, ಹಿಮೋಗ್ಲೋಬಿನ್ ತಪಾಸಣೆ ನಡೆಯಿತು.

ಅಮೃತ ಭಾರತಿ ವಿದ್ಯಾ ಸಂಸ್ಥೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಸುಮಾರು 75 ಜನ ಶಿಬಿರದ ಪ್ರಯೋಜನವನ್ನು ಪಡದುಕೊಂಡರು.ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ವೀಣಾ ಆರ್ ಭಟ್ ಮಾತನಾಡಿದರು.ಹೆಬ್ರಿ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ. ವಿದ್ಯಾಧರ ಹೆಗ್ಡೆ ಎಸ್, ಕಾರ್ಯದರ್ಶಿ ಪ್ರಶಾಂತ್ ಪೈ, ನಿರ್ದೇಶಕರಾದ ಡಾ.ಭಾರ್ಗವಿ ಆರ್ ಐತಾಳ್, ಪ್ರವೀಣ್ ಕುಮಾರ್ ಶೆಟ್ಟಿ, ಬಾಲಚಂದ್ರ ಎಂ., ಆರೋಗ್ಯ ಮತ್ತು ಪರಿಸರ ಸಂಯೋಜಕಿ ಇಂದಿರಾ ಬಾಯರಿ, ಸಂಸ್ಥೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಉಚಿತ ಆರೋಗ್ಯ ಶಿಬಿರ ನಡೆಸಲು ಅವಕಾಶ ಕಲ್ಪಿಸಿ, ಸಹಕಾರ ನೀಡಿದ ಡಾ.ಭಾರ್ಗವಿ ಐತಾಳ್ ಮತ್ತು ಡಾ.ರಾಮಚಂದ್ರ ಐತಾಳ್ ಅವರನ್ನು ಅಭಿನಂದಿಸಲಾಯಿತು. ಲಯನ್ಸ್ ಜಿಲ್ಲಾ ಪ್ರಮುಖರಾದ ಟಿ.ಜಿ.ಆಚಾರ್ಯ ನಿರೂಪಿಸಿ ಸ್ವಾಗತಿಸಿದರು,ಅಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಚಂದ್ರ ಎಂ. ವಂದಿಸಿದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!