Friday, November 13, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಗ್ರಾಮ ಪಂಚಾಯತ್ ಗ್ರಾಮಸಭೆ.

ಹೆಬ್ರಿ ಗ್ರಾಮ ಪಂಚಾಯತ್ ಗ್ರಾಮಸಭೆ.

ಹೆಬ್ರಿ ಗ್ರಾಮ ಪಂಚಾಯತಿ ವ್ಯವಹಾರ ಸಮಗ್ರ ತನಿಖೆಗೆ ಆಗ್ರಹ : ಗ್ರಾಮಸಭೆಯಲ್ಲಿ ಚರ್ಚೆ.

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯಿತಿಯ ಕಳೆದ ಅವಧಿಯಲ್ಲಿ ಪಾರದರ್ಶಕವಾಗಿ ವ್ಯವಹಾರಗಳು ನಡೆದಿಲ್ಲ, ನಮಗೆ ಹಲವು ಸಂಶಯಗಳಿವೆ, ರಸ್ತೆ, ಚರಂಡಿ ದುರಸ್ತಿ, ರಸ್ತೆಯಂಚಿನ ಪೊದೆಗಳ ಕಟಾವು ಸೇರಿ ತುರ್ತು ಅಭಿವೃದ್ಧಿ ಮಾಡಲು ನಿಮ್ಮಲ್ಲಿ ಹಣವಿಲ್ಲ ಬೇಕಾಬಿಟ್ಟಿ ಖರ್ಚು ಮಾಡಲು ಹಣವಿದೆ. ಹಲವು ವಿಷಯಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ತಪ್ಪು ಮಾಹಿತಿ ನೀಡಲಾಗುತ್ತದೆ. ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ನ್ಯಾಯ ನೀಡಬೇಕು, ತಪ್ಪಿತಸ್ಥ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನವೀನ್‌ ಕೆ ಅಡ್ಯಂತಾಯ ಮತ್ತು ಮಾಜಿ ಅಧ್ಯಕ್ಷ ಹೆಚ್.‌ ಕೆ. ಸುಧಾಕರ್‌ ಆಗ್ರಹಿಸಿದರು.

ಅವರು ಶುಕ್ರವಾರ ಸಮಾಜ ಮಂದಿರಲ್ಲಿ ನಡೆದ ಹೆಬ್ರಿ ಗಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಮಾತನಾಡಿದರು.

ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ದುರಾಡಳಿತ ನಡೆದಿದೆ. ವ್ಯವಹಾರಗಳ ಬಗ್ಗೆ ನಮಗೆ ಸಂಶಯವಿದೆ. ಬಡವರಿಗೆ ಒತ್ತಡದ ಮೂಲಕ ತೆರಿಗೆ ವಸೂಲಿ ಮಾಡುತ್ತಿರಿ. ಸ್ಥಿತಿವಂತರ ಸುದ್ದಿಗೆ ನೀವು ಹೋಗುತ್ತಿಲ್ಲ. ನಿಮ್ಮ ದುರಾಡಳಿತದಿಂದ ಹೆಬ್ರಿ ಗ್ರಾಮ ಪಂಚಾಯಿತಿಗೆ ಕೆಟ್ಟ ಹೆಸರು ಬಂದಿದೆ. ನಮಗೆ ಎಲ್ಲವೂ ತಿಳಯಬೇಕು, ಅನಾವಶ್ಯಕವಾಗಿ ಪಂಚಾಯಿತಿಯಿಂದ ಖರ್ಚು ಆಗಿರುವ ಹಣ ಮರಳಿ ಪಂಚಾಯಿತಿ ಖಾತೆಗೆ ಬರಬೇಕು, ಗ್ರಾಮಸ್ಥರಿಗೆ ತಪ್ಪು ಮಾಹಿತಿಯನ್ನು ನೀಡುತ್ತೀರಿ ಎಂದು ನವೀನ್‌ ಕೆ ಅಡ್ಯಂತಾಯ ಆರೋಪಿಸಿದರು. ಕಳೆದ ವರ್ಷದ ತೆರಿಗೆ ವಸೂಲಿಯ ಮಿತಿ ಕಮ್ಮಿಯಾಗಿದೆ. ಸಾಕಾಷ್ಟು ಸಿಬಂದ್ಧಿಗಳಿದ್ದರೂ ಸಮರ್ಪಕ ಕೆಲಸಗಳು ಆಗುತ್ತಿಲ್ಲ, ತೆರಿಗೆ ವಸೂಲಿಯೂ ಆಗುತ್ತಿಲ್ಲ. ಸಾಕಾಷ್ಟು ದುಂದು ವೆಚ್ಚಗಳನ್ನು ಮಾಡಲಾಗಿದೆ ಎಂದು ಹೆಚ್.ಕೆ.ಸುಧಾಕರ್‌ ಹೇಳಿದರು. ಮಾಜಿ ಅಧ್ಯಕ್ಷೆ ಸುಮಾ ನವೀನ್‌ ಅಡ್ಯಂತಾಯ, ಮಾಜಿ ಸದಸ್ಯೆ ಸುಮಿತ್ರಾ ಹೆಗ್ಡೆ, ಮಾಜಿ ಉಪಾಧ್ಯಕ್ಷ ಗಣೇಶ ಕುಮಾರ್‌ ಜರ್ವತ್ತು ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳ ತನಿಖೆಯನ್ನು ಸೂಕ್ತವಾಗಿ ನಡೆಸಬೇಕು ಎಂದು ಒತ್ತಾಯಿಸಿ ಎಲ್ಲಾವನ್ನು ಪುಸ್ತಕದಲ್ಲಿ ದಾಖಲಿಸಿ ನಿರ್ಣಯ ಕೈಗೊಳ್ಳಬೇಕು, ವಿಡಿಯೋ ಚಿತ್ರಣಗಳನ್ನು ನಮಗೆ ನೀಡಬೇಕು ಎಂದು ಒತ್ತಾಯಿಸಿದರು. ನಿತೀಶ್‌ ಪೂಜಾರಿ ಸೇರಿದಂತೆ ಹಲವರು ವಿವಿಧ ವಿಚಾರಗಳ ಬಗ್ಗೆ ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಹೆಬ್ರಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ  ದಿನೇಶ್‌ಡಿ. ಈ., ಮಾತಾನಾಡಿ ಮಾಹಿತಿ ಹಕ್ಕಿನಲ್ಲಿ ನೀಡಿರುವ ತಪ್ಪು ಮಾಹಿತಿ ನೀಡಲಾಗಿದೆ ಎನ್ನುವ ವಿಚಾರಗಳು ಸೇರಿ ಎಲ್ಲಾ ವಿಷಯಗಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪಾರದರ್ಶಕ ಆಡಳಿತವನ್ನು ನಡೆಸಲಾಗುತ್ತದೆ ಎಂದರು.

ಹೆಬ್ರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಶೋಕ್‌ಎಚ್‌. ಈ ಮಾತನಾಡಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಸೇರಿದಂತೆ ಅತ್ಯುತ್ತಮ ಸೇವೆಯನ್ನು ಗ್ರಾಮಸ್ಥರಿಗೆ ನೀಡುತ್ತೇವೆ. ಆಗಿರುವ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ನ್ಯಾಯ ದೊರಕಿಸುತ್ತೇವೆ. ಕಾನೂನು ವ್ಯಾಪ್ತಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದರು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್‌, ಪಂಚಾಯಿತಿ ಲೆಕ್ಕಾಧಿಕಾರಿ ಪ್ರತಿಭಾ, ಲೀಡ್‌ ಬ್ಯಾಂಕ್‌ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಹೆಬ್ರಿ ವಲಯ ಸಹಾಯಕ ಅರಣ್ಯಾಧಿಕಾರಿ ಜಯರಾಮ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಶೋಕ್‌ಎಚ್‌. ಸ್ವಾಗತಿಸಿ ಗ್ರಾಮ ಪಂಚಾಯಿತಿಯ ಪ್ರಸಾದ್‌ ಶೆಟ್ಟಿ ನಿರೂಪಿಸಿ ಆಶಾ ಹೆಗ್ಡೆ ವಾರ್ಷಿಕ ವರದಿ ಮಂಡಿಸಿದರು.

 

 

 

 

 

 

 

 

Previous article
Next article
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!