Thursday, November 12, 2026

ಅಜೆಕಾರು ಯುವಕ ಧರಣೇಂದ್ರ ಆತ್ಮಹತ್ಯೆ.
ಪಿಜಿಯೋಥರಪಿ ಡಿಗ್ರಿ ಮುಗಿಸಿ 1 ವರ್ಷದಿಂದ ಮನೆಯಲ್ಲೆ ಇದ್ದ ಯುವಕ.

ಅಜೆಕಾರು : ಅಜೆಕಾರು ಮರ್ಣೆ ಗ್ರಾಮದ ದೊಡ್ಡಪಲ್ಕೆ ಮನೆಯ ಪ್ರಸನ್ನ ಕುಮಾರ್‌ ಅವರ ಪುತ್ರ ಧರಣೇಂದ್ರ‌ (27) ಮನೆಯ ಬೆಡ್‌ ರೂಮ್‌ ನಲ್ಲಿ ಸ್ಲಾಪ್‌ ಗೆ ಹಾಕಿರುವ ಹುಕ್ಸ್‌ ಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವ ಘಟನೆ ಗುರುವಾರ ನಡೆದಿದೆ.
ಪಿಜಿಯೋಥರಪಿ ಡಿಗ್ರಿ ಮುಗಿಸಿ ಸುಮಾರು 1 ವರ್ಷದಿಂದ ಮನೆಯಲ್ಲೆ ಇದ್ದು ಗಿರುವಾರ ಬೆಳಿಗ್ಗೆ 07:30 ಗಂಟೆಗೆ ತನ್ನ ತಾಯಿಯನ್ನು ಕಾರ್ಕಳ ರೋಟರಿ ಟಿಎಂಎ ಪೈ ಆಸ್ಪತ್ರೆಗೆ ಡಯಾಲಿಸಿಸ್‌ ಬಗ್ಗೆ ಕರೆದು ಹೋಗಿ ಬಿಟ್ಟು ವಾಪಾಸು ಸುಮಾರು 09:30 ಗಂಟೆಗೆ ಮನೆಗೆ ಬಂದಿದ್ದರು. ತಂದೆ ಪ್ರಸನ್ನ ಕುಮಾರ್‌ ಆ ಸಮಯ ಮನೆಯಲ್ಲೇ ಇದ್ದು ನಂತರ ಕೆಲಸದ ಬಗ್ಗೆ ಹೋಗಿದ್ದು ಧರಣೇಂದ್ರನು ಒಬ್ಬನೆ ಮನೆಯಲ್ಲಿದ್ದು ಸುಮಾರು 12:00 ಗಂಟೆಗೆ ಪ್ರಸನ್ನ ಕುಮಾರ್‌ ಅವರಿಗೆ ಪತ್ನಿಯು ಫೋನ್‌ ಕರೆ ಮಾಡಿ ಧರಣೇಂದ್ರನು ಇನ್ನು ನನ್ನನ್ನೂ ಕರೆದುಕೊಂಡು ಬರಲು ಬಂದಿಲ್ಲ ಎಂದು ತಿಳಿಸಿದ್ದು ಪ್ರಸನ್ನ ಕುಮಾರ್‌ ಕೂಡಲೆ ಧರಣೇಂದ್ರನಿಗೆ ಫೋನ್‌ ಕರೆ ಮಾಡಿದ್ದು ಕರೆ ಸ್ವೀಕರಿಸದೆ ಇದ್ದು ಪ್ರಸನ್ನ ಕುಮಾರ್ ಅವರ ಅಣ್ಣ ಅನಂತರಾಜ ಇಂದ್ರ‌ ಅವರಿಗೆ ಫೋನ್‌ ಕರೆ ಮಾಡಿ ಧರಣೇಂದ್ರ ಫೋನ್‌ ಸ್ವೀಕರಿಸುತ್ತಿಲ್ಲ ಒಮ್ಮೆ ಮನೆಗೆ ಹೋಗಿ ನೋಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಮನೆಗೆ ಹೋಗಿ ನೋಡಿದಾಗ ಧರಣೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಕಾರಣ ಇನ್ನಷ್ಟೆ ತಿಳಿಯಬೇಕಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!