Sunday, August 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ ಸಂಪನ್ನ

ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರ ಸಂಪನ್ನ

ಸಂಸ್ಕೃತದಿಂದ ಜಗತ್ತಿನ ಶಾಂತಿ ಸಾಧ್ಯ : ಪ್ರೊ.ಹರಿಪ್ರಸಾದ್ ಕೆ.

ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ದಿನಗಳ ಕಾಲ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಶೃಂಗೇರಿಯ ರಾಜೀವಗಾಂಧಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಹರಿಪ್ರಸಾದ್ ಕೆ ಮಾತನಾಡಿ ಭಾರತದ ಭಾಷೆ ಭಾರತಿ ಅಂದರೆ ಸಂಸ್ಕೃತ, ಭಾರತದ ಇತರ ರಾಜ್ಯ ಭಾಷೆಗಳಲ್ಲಿ ಪ್ರತಿಶತ 70 ಸಂಸ್ಕೃತ ಪದಗಳಿವೆ. ಇತ್ತೀಚಿನ ಸಂಶೋಧನೆಯಂತೆ ಆಂಗ್ಲ ಭಾಷೆಯಲ್ಲಿ 80 ಸಾವಿರ ಸಂಸ್ಕೃತ ಪದಗಳಿವೆ. ಆದ್ದರಿಂದ ಜಗತ್ತಿನ ಎಲ್ಲಾ ಭಾಷೆಗಳಿಗೆ ಸಂಸ್ಕೃತವೇ ಆಧಾರವಾಗಿದೆ. ಹೀಗೆ ವಿಶ್ವದ ಒಳ್ಳೇಯ ವಿಚಾರಗಳನ್ನು ಬಯಸುವವರು ಭಾರತೀಯರಾಗಿದ್ದಾರೆ. ಸಂಸ್ಕೃತದಿಂದ ಜಗತ್ತಿನ ಶಾಂತಿ ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಗುರುದಾಸ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸುಸಂಸ್ಕೃತರಾಗಲು ಸಂಸ್ಕೃತ ಅಧ್ಯಯನ ಅಗತ್ಯವಿದೆ. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಮಾತನಾಡಿ ಭಾರತೀಯರಲ್ಲಿ ರಕ್ತಗತವಾದ ಭಾಷೆ ಸಂಸ್ಕೃತವಾಗಿದೆ. ಹತ್ತು ದಿನಗಳಲ್ಲಿ ಅದರ ಅಧ್ಯಯನದಲ್ಲಿ ಆಸಕ್ತಿ ಮೂಡುವಂತೆ ಸಂಸ್ಕೃತ ಭಾರತಿಯ ಕಾರ್ಯಕರ್ತರು ಮಾಡಿದ್ದಾರೆ ಹೀಗೆ ಸಹಕಾರ ಅಗತ್ಯ ಎಂದರು.

ಅಮೃತ ಭಾರತಿ ಟ್ರಸ್ಟ್ ಸದಸ್ಯ ಬಾಲಕೃಷ್ಣ ಮಲ್ಯ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಹೆಚ್ ವೈ, ಅಪರ್ಣಾ ಆಚಾರ್, ಶಕುಂತಲಾ ಸಂಸ್ಕೃತ ಭಾರತಿಯ ವಿಶ್ವಕ್ಸೇನ, ಶ್ರೀಜಾ ಉದನೇಶ್, ಅಖಿಲಾ ಕೆ , ಪ್ರಣಮ್ಯ ಕೆ ಹಾಗೂ ವಿದ್ಯಾಕೇಂದ್ರದ ಸಂಸ್ಕೃತ ಶಿಕ್ಷಕಿ ಐಶ್ವರ್ಯಲಕ್ಷ್ಮಿ ಮತ್ತು ಗುರುವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ‌ಸಂಸ್ಕೃತ ಗೀತೆ, ಲಘು ನಾಟಕ, ಸಂಭಾಷಣೆ ಕಾರ್ಯಕ್ರಮ ನಡೆಯಿತು. ಸಂಸ್ಕೃತ ಭಾರತಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರತಿಷ್ಠಾ ಸ್ವಾಗತಿಸಿ, ಸಾನ್ವಿ ವಂದಿಸಿ, ಪ್ರಣಮ್ಯ ಕೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments