Sunday, August 9, 2026
Homeಕಾರ್ಕಳಅಜೆಕಾರು : ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಬೀದಿ...

ಅಜೆಕಾರು : ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಬೀದಿ ನಾಟಕ.

ಅಜೆಕಾರು : ಹೆಬ್ರಿ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಅಜೆಕಾರು ವಲಯದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮ ಇತ್ತೀಚೆಗೆ ಪಂಚಗಂಗಾವಳಿ ಜ್ಞಾನ ವಿಕಾಸ ಕೇಂದ್ರ ಉಪ್ಪಿನಕುದ್ರು ಸದಸ್ಯರ ತಂಡದಿಂದ ಜರುಗಿತು.  ಸಾರ್ವಜನಿಕರಿಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಮೂಡನಂಬಿಕೆ, ಪ್ಲಾಸ್ಟಿಕ್ ಬಳಕೆ ಇತ್ಯಾದಿ ವಿಷಯಗಳ ಕುರಿತು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮವನ್ನು ಮರ್ಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಕಿತಾ ಉದ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಸಾರ್ವಜನಿಕರಿಗೆ ತುಂಬಾ ಅವಶ್ಯಕತೆ ಇದೆ, ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ನೀರಿನ ಸದ್ಬಳಕೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು. ಯೋಜನೆಯ ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯ ನಂದಕುಮಾರ್ ಹೆಗ್ಡೆ, ಅಜೆಕಾರು ವಲಯ ಅಧ್ಯಕ್ಷ ಶಂಕರಾಚಾರ್ಯ, ಒಕ್ಕೂಟದ ಅಧ್ಯಕ್ಷ ಪ್ರವೀಣ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರವತಿ, ರೇಣುಕಾ, ಮೇಲ್ವಿಚಾರಕಿ ನಿಶ್ಮಿತಾ, ಸೇವಾ ಪ್ರತಿನಿಧಿ ವಿಜಯ ಕಾಮತ್, ಜ್ಞಾನವಿಕಾಸದ ಸದಸ್ಯರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments