Wednesday, September 23, 2026
Homeಕಾರ್ಕಳಅರಸಮ್ಮಕಾನು ಶೇಡಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ವಿದ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆ.

ಅರಸಮ್ಮಕಾನು ಶೇಡಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ವಿದ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆ.

ಶೇಡಿಮನೆ : ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಸಮ್ಮ ಕಾನು ಶೇಡಿಮನೆ ಇಲ್ಲಿನ 5 ವಿದ್ಯಾರ್ಥಿನಿಯರಾದ ಪ್ರಜ್ಞಾ ಆರ್, ಸಮೃದ್ಧಿ ಶೆಟ್ಟಿ ಪ್ರಜ್ಞಾ ಎಂ ಶೆಟ್ಟಿ , ಸಿಂಚನಾ, ವಂದನ ಅವರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರಜ್ಞಾ ಆರ್ ಮತ್ತು ಸಮೃದ್ಧಿ ಶೆಟ್ಟಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅವರನ್ನು ಮುಖ್ಯ ಶಿಕ್ಷಕರು ಅಧ್ಯಾಪಕ ವೃಂದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಹಳೇ ವಿದ್ಯಾರ್ಥಿ ಸಂಘು ಅಧ್ಯಕ್ಷರು ಸರ್ವ ಸದಸ್ಯರು ಆರ್ಥಿಕ ಸಮಿತಿ ಅಧ್ಯಕ್ಷರು ಸರ್ವಸದಸ್ಯರು ಪೋಷಕರು ಊರ ವಿದ್ಯಾಭಿಮಾನಿಗಳು ಮಕ್ಕಳಿಗೆ ಶುಭ ಹಾರೈಸಿದ್ದಾರೆ.

ಮುಖ್ಯ ಶಿಕ್ಷಕಿ ಮೀನಾಕ್ಷಿ ರಾವ್ ದೈಹಿಕ ಶಿಕ್ಷಣ ಶಿಕ್ಷಕಿ ಉಷಾಲತ ತಂಡದ ವ್ಯವಸ್ಥಾಪಕಿ ಶೋಭಾ ಟೀಂ ಕೋಚ್ ಪ್ರೀತಂ ಶೆಟ್ಟಿ ಆದಿತ್ಯ ರಾಘವೇಂದ್ರ ಸಹಕರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!