Friday, September 25, 2026
Homeಹೆಬ್ರಿಹೆಬ್ರಿ ಅಮೃತಭಾರತಿಯಲ್ಲಿ ಸೇವಾ ಸಂಗಮ ಶಿಶು ಮಂದಿರದ ಪ್ರಾರಂಭೋತ್ಸವ.

ಹೆಬ್ರಿ ಅಮೃತಭಾರತಿಯಲ್ಲಿ ಸೇವಾ ಸಂಗಮ ಶಿಶು ಮಂದಿರದ ಪ್ರಾರಂಭೋತ್ಸವ.

ಹೆಬ್ರಿ : ಹೆಬ್ರಿ ಸೇವಾ ಸಂಗಮ ಶಿಶು ಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅಧ್ಯಕ್ಷತೆಯನ್ನು ಟ್ರಸ್ಟ್ ಸದಸ್ಯ ಸುಧೀರ್ ನಾಯಕ್ ವಹಿಸಿ ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಪೋಷಕರಿಂದ ಮತ್ತು ಸ್ವಸ್ಥ ಸಮಾಜದಿಂದ ಆಗಬೇಕು ಈ ನಿಟ್ಟಿನಲ್ಲಿ ಉತ್ತಮ ಸಂಸ್ಕಾರ ನೀಡುವ ಸಂಸ್ಥೆಗಳು ಬೇಕು ಎಂದು ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಮಾತನಾಡಿದರು. ಪುಟಾಣಿಗಳನ್ನು ಸಾಂಪ್ರದಾಯಿಕವಾಗಿ ಚೆಂಡೆ ವಾದನ, ಪೌರಾಣಿಕ ವೇಷಭೂಷಣದ ಮೂಲಕ ಶೋಭಾ ಯಾತ್ರೆ ನಡೆಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು.

ಅಮೃತ ಭಾರತಿ ಟ್ರಸ್ಟಿನ ಬಾಲಕೃಷ್ಣ ಮಲ್ಯ, ರಾಜೇಶ್ ನಾಯಕ್, ಶೈಲೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್,  ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮುಖ್ಯಸ್ಥ ಅರುಣ್ ಹೆಚ್ ವೈ, ಅಪರ್ಣಾ ಆಚಾರ್, ಶಕುಂತಲಾ, ಪಿ ಆರ್ ಓ ವಿಜಯಕುಮಾರ್ ಶೆಟ್ಟಿ, ಶಿಶು ಮಂದಿರದ ಸದಸ್ಯರಾದ ಆಶಾ ನಾಯಕ್, ಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು

ಶಿಶು ಮಂದಿರದ ಮುಖ್ಯ ಶಿಕ್ಷಕಿ ಮೀನಾಕ್ಷಿ ಸ್ವಾಗತಿಸಿ, ಮಲ್ಲಿಕಾ ವಂದಿಸಿ, ಅನಿತಾ ನಿರೂಪಿಸಿ, ನಿವೇದಿತಾ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!