Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಪ್ರಕೃತಿಯ ಪೂಜೆಯಿಂದ ಪರಿಸರದ ಉಳಿವು – ಅರಣ್ಯಾಧಿಕಾರಿ ಹೇಮಾ.

ಪ್ರಕೃತಿಯ ಪೂಜೆಯಿಂದ ಪರಿಸರದ ಉಳಿವು – ಅರಣ್ಯಾಧಿಕಾರಿ ಹೇಮಾ.

ಕೊಂಜಾಡಿ : ಪ್ರಕೃತಿ ಪೂಜೆ ವನಮಹೋತ್ಸವ ಕಾರ್ಯಕ್ರಮ
ಬೆಳ್ವೆ : ಪ್ರಕೃತಿಯು ಸಮೃದ್ಧ ಕಾಡು, ಶುದ್ಧ ಗಾಳಿ ಸಹಿತ ಹಲವಾರು ಪರಿಸರ ಸ್ವಚ್ಛತೆಯ ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಪ್ರಕೃತಿಯ ಪೂಜೆಯಿಂದ ಪರಿಸರದ ಉಳಿವಿಗೆ ಸಾಧ್ಯವಿದೆ, ಮುಂದಿನ ಭವಿಷ್ಯಕ್ಕಾಗಿ ಪರಿಸರದ ಉಳಿವು ಅಗತ್ಯವಾಗಿದೆ. ಯುವ ಜನತೆ ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗಾಗಿ ಉಳಿಸುವಲ್ಲಿ ಮಹತ್ವದ ಹೊಣೆಗಾರಿಕೆಯಿದೆ ಎಂದು ಹೆಬ್ರಿ ವಲಯ ಅರಣ್ಯ ಇಲಾಖೆ ಅಲ್ಬಾಡಿ ಘಟಕದ ಉಪ ವಲಯಾರಣ್ಯಾಧಿಕಾರಿ ಹೇಮಾ ಹೇಳಿದರು.
ಅವರು ಜಿಲ್ಲಾ ರಾಜ್ತೋತ್ಸವ ಪ್ರಶಸ್ತಿ ಪುರಸ್ಕೃತ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇತ್ರತ್ವದಲ್ಲಿ ಅರಣ್ಯ ಇಲಾಖೆ ಹೆಬ್ರಿ ವಲಯ, ಬೆಳ್ವೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶ್ರಮದಾನ,ಪ್ರಕೃತಿ ಪೂಜೆ,ವನಮಹೋತ್ಸವ,ಪರಿಸರ ಸ್ವಚ್ಚತಾ ಕಾರ್ಯಕ್ರಮದ ಪ್ರಯುಕ್ತ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರದಲ್ಲಿ ಭಾನುವಾರ ಮಾತನಾಡಿದರು.ಬೆಳ್ವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಚಂದ್ರಶೇಖರ್ ಶೆಟ್ಟಿ ಸರ‍್ಗೋಳಿ, ಸದಸ್ಯ ಸತೀಶ್ ಶೆಟ್ಟಿ ಕೆರ್ಜಾಡಿ ಗುಡ್ಡೆಯಂಗಡಿ,ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ,ಕೊಂಜಾಡಿ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಆನಂದ ಶೆಟ್ಟಿ ನರ‍್ಗುಗಡಿಗೆ,ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ ಸಂಜೀವ ಆರ್ಡಿ, ಅಲ್ಬಾಡಿ ಗಸ್ತು ಅರಣ್ಯ ಪಾಲಕ ಸಂತೋಷ ಜೋಗಿ,ಮಡಾಮಕ್ಕಿ ಗಸ್ತು ಅರಣ್ಯ ಪಾಲಕ ಮಲ್ಲಯ್ಯ,ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾರ್ಯದರ್ಶಿ ಪ್ರತಾಪ್ ಕಿಬ್ಬೆಬೈಲು , ಶ್ರಮಧಾನ ತಂಡದ ಮುಖಂಡ ಪ್ರತಾಪ್ ಕುಲಾಲ,ಭಜನಾ ಮಂಡಳಿ ಸದಸ್ಯರು,ಸ್ಥಳೀಯರು ಉಪಸ್ಥಿತರಿದ್ದರು.ಕೊಂಜಾಡಿ ಪೇಟೆಯಿಂದ ದೇವಳದ ತನಕ ರಸ್ತೆಯ ಬದಿಗಳಲ್ಲಿ ಸಾಲು ಗಿಡಗಳನ್ನು ನೇಡಲಾಯಿತು.ಶ್ರಮದಾನ,ಪ್ರಕೃತಿ ಪೂಜೆ,ವನಮಹೋತ್ಸವ,ಪರಿಸರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಅರ್ಚಕ ಶ್ರೀನಾಥ್ ಜಿ ಪ್ರಕೃತಿ ಪೂಜೆ ನೆರವೇರಿಸಿದರು.
ವಿವಿಧ ತಳಿಯ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಗಣೇಶ್ ಆಚಾರ್ಯ ಕೊಂಜಾಡಿ ಪ್ರಾಸ್ತಾವಿಕ ಮಾತನಾಡಿದರು. ಸುದರ್ಶನ್ ಆರ್ಡಿ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments