Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಮನುಷ್ಯನಿಗೆ ಕಣ್ಣು ಕೂಡ ಪ್ರಮುಖ ಅಂಗ - ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ಅಗತ್ಯ : ನೇತ್ರ...

ಮನುಷ್ಯನಿಗೆ ಕಣ್ಣು ಕೂಡ ಪ್ರಮುಖ ಅಂಗ – ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ಅಗತ್ಯ : ನೇತ್ರ ತಜ್ಞೆ , ಡಾ.ವಿಜಯಲಕ್ಶ್ಮೀ ನಾಯಕ್ .

ಬೆಳ್ವೆಯಲ್ಲಿ ಕಣ್ಣಿನ ಪರೀಕ್ಷೆ – ಕ್ಯಾಟರಾಕ್ಟ್ – ದೃಷ್ಠಿದೋಷ ತಪಾಸಣೆ ಶಿಬಿರ.
ಬೆಳ್ವೆ : ಜನರ ಆರೋಗ್ಯದ ಹಿತದೃಷ್ಠಿಯಲ್ಲಿ ಕಣ್ಣು ಪ್ರಮುಖ ಅಂಗವಾಗಿದೆ.ಕಣ್ಣಿನ ಸಮಸ್ಯೆಗಳ ಬಗ್ಗೆ ಯಾವುದೇ ನಿರ್ಲಕ್ಷ ವಹಿಸದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು.ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಕಣ್ಣಿನ ಚಿಕಿತ್ಸೆಯ ಬಗ್ಗೆ ಹಮ್ಮಿಕೊಳ್ಳುವ ವೈದ್ಯಕೀಯ ಶಿಬಿರಗಳಿಂದ ಪ್ರಯೋಜನಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ. ವಿಜಯಲಕ್ಶ್ಮೀ ನಾಯಕ್ ಹೇಳಿದರು.

ಅವರು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ವೆ,ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಸಹ ಭಾಗೀತ್ವದಲ್ಲಿ ಕಣ್ಣಿನ ಪರೀಕ್ಷೆ,ಕ್ಯಾಟರಾಕ್ಟ್,ದೃಷ್ಠಿದೋಷ ಚಿಕಿತ್ಸಾ ಉಚಿತ ಶಿಬಿರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪ ಕಿಣಿ ಬೆಳ್ವೆ ಅಧ್ಯಕ್ಷತೆ ವಹಿಸಿ ಜನರಿಗೆ ಕಣ್ಣಿನ ಸಮಸ್ಯೆಗಳ ಬಗ್ಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಅನುಕೂಲವಾಗುವಂತೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ವೈದ್ಯರ ಸಲಹೆಗಳನ್ನು ಪಡೆದುಕೊಂಡು ಉಚಿತ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಸುಮನ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಚ್ ವಸಂತಕುಮಾರ್ ಶೆಟ್ಟಿ ಬೆಳ್ವೆ, ವೈ ಪಟ್ಟಾಭಿರಾಮ್ ಭಟ್ ಮರೂರು, ಕಾರ್ಯದರ್ಶಿ ಕೆ ಸಂಜೀವ ಆರ್ಡಿ, ಸದಸ್ಯೆ ಶಶಿಕಲಾ ಅಲ್ಸೆ ಸೆಟ್ಟೋಳಿ ಉಪಸ್ಥಿತರಿದ್ದರು.
ಕಣ್ಣಿನ ಪರೀಕ್ಷೆ,ಕ್ಯಾಟರಾಕ್ಟ್,ದೃಷ್ಠಿದೋಷ ಚಿಕಿತ್ಸಾ ಉಚಿತ ಶಿಬಿರದಲ್ಲಿ 90 ಕ್ಕೂ ಮಿಕ್ಕಿದ ಜನರು ಪ್ರಯೋಜನವನ್ನು ಪಡೆದರು.

ಕೆ.ಸಂಜೀವ ಆರ್ಡಿ ಸ್ವಾಗತಿಸಿದರು. ಶಶಿಕಲಾ ಅಲ್ಸೆ ಸೆಟ್ಟೋಳಿ ಪ್ರಾರ್ಥಿಸಿದರು., ವೈ ಪಟ್ಟಾಭಿರಾಮ್ ಭಟ್ ಮರೂರು ಪ್ರಾಸ್ತಾವಿಕ ಮಾತನಾಡಿದರು. ವಿಜಯಕುಮಾರಿ ನಿರೂಪಿಸಿದರು.ಎಚ್ ವಸಂತ ಕುಮಾರ್ ಶೆಟ್ಟಿ ಬೆಳ್ವೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments