Sunday, August 9, 2026
Homeಹೆಬ್ರಿಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ತರಗತಿಗಳ ಮಾಹಿತಿ ಕಾರ್ಯಕ್ರಮ.

ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ತರಗತಿಗಳ ಮಾಹಿತಿ ಕಾರ್ಯಕ್ರಮ.

ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘದ ಆಶ್ರಯದಲ್ಲಿ “SCIENCE – LAUNCH PAD – 2026-27″* ಎಂಬ _ಸ್ಪರ್ಧಾತ್ಮಕ ತರಗತಿಗಳ ಮಾಹಿತಿ ಕಾರ್ಯಕ್ರಮ ಶನಿವಾರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುದರ್ಶನ್ ಶೆಟ್ಟಿ ಮಾಹಿತಿ ನೀಡಿ “JEE ಮತ್ತು NEET ಪರೀಕ್ಷೆಗಳ ಪ್ಯಾಟರ್ನ್, ಪ್ರಶ್ನೆಪತ್ರಿಕೆಯ ವಿನ್ಯಾಸ ಮತ್ತು ಹಿಂದಿನ ವರ್ಷಗಳ ಪ್ರಶ್ನೆಗಳ ವಿಶ್ಲೇಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪರಿಕಲ್ಪನೆಗಳ ಸ್ಪಷ್ಟತೆ, NCERT ಆಧಾರಿತ ಅಧ್ಯಯನ, ಟೈಮ್ ಮ್ಯಾನೇಜ್ಮೆಂಟ್ ಮತ್ತು ಮೋಕ್ ಟೆಸ್ಟ್‌ಗಳ ಮೂಲಕ ಹೇಗೆ ಪರೀಕ್ಷೆಯನ್ನು ಕ್ರ್ಯಾಕ್ ಮಾಡಬಹುದು ಎಂಬ ತಂತ್ರಗಳನ್ನು ವಿವರಿಸಿದರು. ಪ್ರಥಮ ಪಿಯುಸಿ ಯಿಂದಲೇ ಅಡಿಪಾಯ ಹಾಕಿದರೆ ಟಾಪ್ ರ್ಯಾಂಕ್ ಸಾಧಿಸುವುದು ಸುಲಭ” ಎಂದು ಹೇಳಿದರು.

ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಚಿತ್ರಾ ವಿ ನಾಯಕ್ ಮಾತನಾಡಿ, “KCET ಮತ್ತು NEET ನಲ್ಲಿ ಜೀವಶಾಸ್ತ್ರದ ಪಾತ್ರ ಮತ್ತು ಅವಕಾಶಗಳ ಬಗ್ಗೆ ವಿವರಿಸಿದರು. NEET ನಲ್ಲಿ 50% ಪ್ರಶ್ನೆಗಳು ಬಯೋದಿಂದ ಬರುವುದರಿಂದ ಅದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರಶ್ನೆಪತ್ರಿಕೆಯ ಪ್ಯಾಟರ್ನ್, ಪ್ರಮುಖ ಅಧ್ಯಾಯಗಳು ಮತ್ತು ಹೇಗೆ 360/360 ಅಂಕ ಗಳಿಸಬಹುದು ಎಂಬ ಮಾರ್ಗದರ್ಶನ ನೀಡಿದರು. ಸಮಯದ ಸದುಪಯೋಗ ಮತ್ತು ನಿರಂತರ ರಿವಿಷನ್‌ನಿಂದ ಟಾಪ್ ರ್ಯಾಂಕ್ ಪಡೆಯಬಹುದು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಎಚ್. ರಾಜೇಶ್ ನಾಯಕ್ “ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಟ್ರಸ್ಟ್ ವತಿಯಿಂದ NEET, JEE ಮತ್ತು KCET ಪರೀಕ್ಷೆಗಳಲ್ಲಿ ಟಾಪ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್ಷಿಪ್ ನೀಡಲಾಗುವುದು”_ ಎಂದು ಘೋಷಿಸಿದರು. ಕಠಿಣ ಪರಿಶ್ರಮ, ತ್ಯಾಗ ಮತ್ತು ಆತ್ಮವಿಶ್ವಾಸದಿಂದ ಪ್ರತಿ ವಿದ್ಯಾರ್ಥಿಯೂ ವೈದ್ಯ, ಇಂಜಿನಿಯರ್ ಆಗುವ ಕನಸನ್ನು ನನಸು ಮಾಡಿಕೊಳ್ಳಬಹುದು” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಮಾತನಾಡಿ “ಅಮೃತ ಭಾರತಿ ಕಾಲೇಜಿನ ಧ್ಯೇಯ ‘Journey To Top Ranks Begins Here’. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈಗಿನಿಂದಲೇ ತಯಾರಿ ನಡೆಸಬೇಕು. ವರ್ಷವಿಡೀ ಕಾಲೇಜು ವೇಳಾಪಟ್ಟಿಯಂತೆ Competitive Classes, Weekly Tests, Mock Exams ನಡೆಸಲಾಗುವುದು. NCERT ಪುಸ್ತಕಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು. NCERTಯೇ NEET/JEE ಯ ಅಡಿಪಾಯವಾಗಿದೆ ಎಂದರು.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮಾಹಿತಿ ಕಾರ್ಯಕ್ರಮದಲ್ಲಿ ಅಮೃತ ಭಾರತಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಚ್. ರಾಜೇಶ್ ನಾಯಕ್, ಪ್ರಾಂಶುಪಾಲ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments