Sunday, August 9, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ಮದಗ ಫ್ರೆಂಡ್ಸ್ ನಿಂದ : ಗಿಡ ನೆಡುವ ಕಾರ್ಯಕ್ರಮ

ಮುದ್ರಾಡಿ ಮದಗ ಫ್ರೆಂಡ್ಸ್ ನಿಂದ : ಗಿಡ ನೆಡುವ ಕಾರ್ಯಕ್ರಮ

ಮುದ್ರಾಡಿ : ಮದಗ ಫ್ರೆಂಡ್ಸ್ ಮುದ್ರಾಡಿ ಸಂಘಟನೆ ನೇತೃತ್ವದಲ್ಲಿ, ಕಾಡು ಕನ್ಸರ್ವೇಷನ್ ಟ್ರಸ್ಟ್ ಸಹಕಾರದೊಂದಿಗೆ ಪರಿಸರ ಸಂರಕ್ಷಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕಾಡು ಕನ್ಸರ್ವೇಷನ್ ಟ್ರಸ್ಟ್ ನೀಡಿದ ಗಿಡವನ್ನು ಮುದ್ರಾಡಿ ಮದಗದ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಡಲಾಯಿತು. ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸನತ್ ಕುಮಾರ್, ಶುಭಧರ ಶೆಟ್ಟಿ, ಮದಗ ಫ್ರೆಂಡ್ಸ್ ಮುದ್ರಾಡಿ ಸಂಘಟನೆ ಅಧ್ಯಕ್ಷ ಸಂತೋಷ್ ಶೆಟ್ಟಿಗಾರ್, ಉಪಾಧ್ಯಕ್ಷೆ ಪ್ರಮೀಳಾ ಜಯ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಕಾಡು ಕನ್ಸರ್ವೇಷನ್ ಟ್ರಸ್ಟ್ ಸದಸ್ಯ ರಾಮ್ ಪ್ರಸಾದ್ ಮುದ್ರಾಡಿ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments