ಮುದ್ರಾಡಿ : ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಜಯ್ಯ ಶೆಟ್ಟಿ ಸ್ಮರಣಾರ್ಥ ಮಕ್ಕಳು ಭೂಮಿಶ್ರೀ ಭೀಮನಗರ ಮುದ್ರಾಡಿ ಅವರು ನಿರ್ಮಿಸಿಕೊಟ್ಟ ಔಷಧೀಯ ವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸುಷ್ಮಾ ನವೀನ ಶೆಟ್ಟಿ ಉದ್ಘಾಟನೆಯನ್ನು ನೆರವೇರಿಸಿದರು. ಸಭಾ ಆದ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್ ವಹಿಸಿದ್ದರು.
ಮುದ್ರಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ಹೆಗ್ಡೆ, ಮುಖ್ಯಶಿಕ್ಷಕ ನಾರಾಯಣ ಬಿ., ಮಕ್ಕಳ ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ನಾರಾಯಣ ಬಿ ಸ್ವಾಗತಿಸಿ ಶ್ರೀನಿವಾಸ ಭಂಡಾರಿ ಮುದ್ದೂರು ನಿರೂಪಿಸಿ ಸತೀಶ ಬೇಳಂಜೆ ವಂದಿಸಿದರು.




