Sunday, August 9, 2026
Homeಹೆಬ್ರಿಆಗುಂಬೆ ಘಾಟಿ : ಘನವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ; ಹೆಬ್ರಿಯ ಉದ್ಯಮಿಗಳ ನಿಯೋಗದಿಂದ ಶಾಸಕ...

ಆಗುಂಬೆ ಘಾಟಿ : ಘನವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ; ಹೆಬ್ರಿಯ ಉದ್ಯಮಿಗಳ ನಿಯೋಗದಿಂದ ಶಾಸಕ ಸುನೀಲ್‌ ಕುಮಾರ್‌ ಗೆ ಮನವಿ.

ಹೆಬ್ರಿ : ಆಗುಂಬೆ ಘಾಟಿಯಲ್ಲಿ ಘನವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಹೆಬ್ರಿಯ ವಿವಿಧ ಉದ್ಯಮಿಗಳ ನಿಯೋಗ ಶಾಸಕ ಸುನೀಲ್‌ ಕುಮಾರ್‌ ಅವರಿಗೆ ಮನವಿ ನೀಡಿದರು. 

ಆಗುಂಬೆ ಘಾಟಿಯಲ್ಲಿ ಘನವಾಹನಗಳ ಸಂಚಾರ ನಿಷೇಧದಿಂದ ಗೇರುಬೀಜ, ರೈಸ್‌ ಮಿಲ್‌ ಉದ್ಯಮ ಸಹಿತ ಉದ್ಯಮ ವಲಯಕ್ಕೆ ಭಾರಿ ತೊಂದರೆಯಾಗಿದೆ. ಕನಿಷ್ಠ ೮ ಟನ್‌ ಸಾಗಾಟಕ್ಕಾದರೂ ಅವಕಾಶ ಕಲ್ಪಿಸಲು ಅನುಮತಿ ಕೊಡಿಸುವಂತೆ ಬಿಜೆಪಿ ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಯುವ ಉದ್ಯಮಿ ಕನ್ಯಾನ ರೈತಸೇವಾ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಲಕ್ಷ್ಮೀನಾರಾಯಣ ನಾಯಕ್‌ ನೇತ್ರತ್ವದಲ್ಲಿ ಶಾಸಕ ಸುನೀಲ್‌ ಕುಮಾರ್‌ ಅವರಿಗೆ ಹೆಬ್ರಿಯಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

ಉದ್ಯಮಕ್ಕೆ ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ., ಕಚ್ಚಾವಸ್ತುಗಳನ್ನು ತರಲು ಸಮಸ್ಯೆಯಾಗುತ್ತಿದೆ ಎಂದು ಉದ್ಯಮಿಗಳು ಶಾಸಕರಿಗೆ ಮನವರಿಕೆ ಮಾಡಿದರು. ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕರು ಭರವಸೆ ನೀಡಿದರು. 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments