Saturday, August 8, 2026
Homeಹೆಬ್ರಿಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಗೆ ನೇಮಕ.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಗೆ ನೇಮಕ.

ಹೆಬ್ರಿ : ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ತಾಲ್ಲೂಕು ನೂತನ ಘಟಕದ ಮುಂದಿನ 3 ವರ್ಷದ ಅವಧಿಗೆ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳನ್ನು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರ ಸಲಹೆ ಹಿನ್ನಲೆಯಲ್ಲಿ ಆಯ್ಕೆ ಮಾಡಲಾಗಿದೆ.

ವರಂಗದ ವೀಣಾ ಆರ್ ಭಟ್ ಚೇರ್ಮೆನ್, ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ವೈಸ್ ಚೇರ್ಮನ್, ಹೆಬ್ರಿ ಕಲ್ಲಿಲ್ಲು ಪ್ರಕಾಶ್ ಶೆಟ್ಟಿ ಕೋಶಾಧಿಕಾರಿ, ಪ್ರಶಾಂತ್ ಪೈ ಮುದ್ರಾಡಿ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. 

ನಿರ್ದೇಶಕರಾಗಿ ಡಾ.ಭಾರ್ಗವಿ ಐತಾಳ್, ಡಾ.ಸುಶ್ಮಾ ಆರ್. ಹೆಗ್ಡೆ, ಬಾಲಚಂದ್ರ ಮುದ್ರಾಡಿ, ಜನಾರ್ಧನ ಹೆಚ್. ಹೆಬ್ರಿ, ಪ್ರವೀಣ್ ಶೆಟ್ಟಿ, ಸೋನಿ ಪಿ.ಶೆಟ್ಟಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಸುಕುಮಾರ ಮುನಿಯಾಲ್‌, ಸುರೇಶ್ ಪೂಜಾರಿ ಮತ್ತು ರಾಧಾಕೃಷ್ಣ ಕ್ರಮದಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚೇರ್ಮನ್‌ ವೀಣಾ ಆರ್‌ ಭಟ್‌ ತಿಳಿಸಿದ್ದಾರೆ. 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments