ಹೆಬ್ರಿಯ ಇಂದಿರಾನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದಗ ಕ್ರಿಕೆಟರ್ಸ್ (ರಿ.) ವತಿಯಿಂದ ಆಯೋಜಿಸಲಾಗುತ್ತಿರುವ 30ನೇ ವರ್ಷದ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಭಾನುವಾರ ಶ್ರೀರಾಘವೇಂದ್ರ ಮಠದ ಸಭಾಂಗಣದಲ್ಲಿ ಮನವಿ ಪತ್ರ ಹಾಗೂ ಗಣೇಶೋತ್ಸವದ ಲಾಂಛನ (ಲೋಗೋ) ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಕೆ. ಯಶವಂತ ರಾವ್ ಅವರು ಮನವಿ ಪತ್ರ ಹಾಗೂ ಲಾಂಛನವನ್ನು ಬಿಡುಗಡೆಗೊಳಿಸಿದರು.
ಹೆಬ್ರಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಗೋಪಾಲ ಆಚಾರ್ಯ ಬೈಲುಮನೆ ಮತ್ತು ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಕರುಣಾಕರ ರಾವ್, ಸುನಿಲ್ ಭಂಡಾರಿ, ಕರುಣಾಕರ ನಾಯ್ಕ್,ಸುಧಾಕರ್ ನಾಯ್ಕ್, ಗೋಪಾಲ ಆಚಾರ್ಯ, ಸಂಪತ್ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ನಾಗರಾಜ್ ನಾಯ್ಕ್, ಸುಕೇಶ್ ಶೆಟ್ಟಿ, ಪ್ರಸಾದ್ ಭಂಡಾರಿ, ಸಂದೀಪ್ ಆಚಾರ್ಯ, ಪ್ರಕಾಶ್ ಶೆಟ್ಟಿ ಸೇರಿದಂತೆ ಸಮಿತಿಯ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.


