Saturday, August 8, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿಯಲ್ಲಿ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ 5ನೇ ಆರಾಧನಾ ಮಹೋತ್ಸವ.

ಮುದ್ರಾಡಿಯಲ್ಲಿ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ 5ನೇ ಆರಾಧನಾ ಮಹೋತ್ಸವ.

ಯಕ್ಷಗಾನ ತಾಳಮದ್ದಳೆ ಶ್ರೀ ಕೃಷ್ಣ ಸಂಧಾನ.

ಮುದ್ರಾಡಿ : ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಜುಲೈ 26ರಂದು ಭಾನುವಾರ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರವನ್ನು ಬೆಳಗಿಸಿದ ಧರ್ಮಯೋಗಿ ಮೋಹನ ಸ್ವಾಮೀಜಿಯವರ 5ನೇ ವರ್ಷದ ಆರಾಧನಾ ಮಹೋತ್ಸವ ನಡೆಯಿತು.

ಬೆಳಿಗ್ಗೆ 6:30 ರಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಶ್ರೀ ಕೃಷ್ಣ ಸಂಧಾನ ನಡೆಯಿತು.
ಭಾಗವತರಾಗಿ ಡಾ. ಪ್ರಖ್ಯಾತ್ ಶೆಟ್ಟಿ, ಚೆಂಡೆ ಕೌಶಿಕ್‌ ರಾವ್‌, ಮದ್ದಳೆ ಗುರುಪ್ರಸಾದ್‌ ಬೊಳ್ಳಿಂಜಡ್ಕ ಸಹಕರಿಸಿದರು. ಪ್ರೋ.ಪವನ್‌ ಕಿರಣ್‌ ಕೆರೆ ಕೃಷ್ಣನಾಗಿ, ಪೆರ್ಮುದೆ ಜಯಪ್ರಕಾಶ ಶೆಟ್ಟಿ ಕೌರವನಾಗಿ ತಾಳಮದ್ದಳೆ ನಡೆಸಿಕೊಟ್ಟರು.

ಕ್ಷೇತ್ರದ ಧರ್ಮಾಧಿಕಾರಿ ಧರ್ಮಯೋಗಿ ಸುಕುಮಾರ್‌ ಮೋಹನ್‌, ರಂಗ ನಿರ್ದೇಶಕ ಜಗದೀಶ್ ಜಾಲ ಬೆಂಗಳೂರು ಸಹಿತ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments