ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಮಾತೃಭಾರತಿಯಿಂದ ಶುಕ್ರವಾರ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು.
ನಿವೃತ್ತ ಶಿಕ್ಷಕಿ ಅಹಲ್ಯಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಾರೀರಿಕ ಪ್ರಮುಖ್ ಪ್ರಮೀಳಾ ಕಾರ್ಕಳ ತ್ಯಾಗ ಮತ್ತು ಜ್ಞಾನ ಬೆಳಕಿನ ಸಂಕೇತವಾದ ಭಗವಾಧ್ವಜವೇ ನಮ್ಮ ಗುರು ಎಂದು ಬಣ್ಣಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕರು, ಮಾತೆಯರು ಮತ್ತು ಸಂಸ್ಕಾರ ಪ್ರಮುಖ್ ಮೀನಾಕ್ಷಿ ಉಪಸ್ಥಿತರಿದ್ದರು. ಮಾತೃ ಮಂಡಳಿಯ ಹರ್ಷಿತಾ ವೈಯಕ್ತಿಕ ಗೀತೆ ಹಾಡಿದರು.ಅಮೃತ ಸ್ವಾಗತಿಸಿ, ರೂಪಾ ಹೆಗ್ಡೆ ವಂದಿಸಿ, ಮಮತಾ ನಿರೂಪಿಸಿದರು.


