Sunday, August 9, 2026
Homeಬೆಳ್ವೆ ಗ್ರಾಮ ಪಂಚಾಯತ್‌ಜೀವನದಲ್ಲಿ ಕನಸು, ಆತ್ಮಸ್ಥೆರ್ಯ ನಿರ್ಧಾರ ಪರಿಶ್ರಮಗಳಿಂದ ಯಶಸ್ಸು : ಸಂಪತ್‌ಕುಮಾರ್ ಶೆಟ್ಟಿ.

ಜೀವನದಲ್ಲಿ ಕನಸು, ಆತ್ಮಸ್ಥೆರ್ಯ ನಿರ್ಧಾರ ಪರಿಶ್ರಮಗಳಿಂದ ಯಶಸ್ಸು : ಸಂಪತ್‌ಕುಮಾರ್ ಶೆಟ್ಟಿ.

ನ್ಯಾಶನಲ್ ಲೆವೆಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ವಿಜೇತ ಧನುಷ್ ಗೆ ಹೂಟ್ಟೂರ ಸನ್ಮಾನ.

ಗೋಳಿಯಂಗಡಿ ( ಬೆಳ್ವೆ ) ಜೀವನದಲ್ಲಿ ಉತ್ತಮ ಕನಸುಗಳು ಆತ್ಮಸ್ಥೆರ್ಯ ನಿರ್ಧಾರಗಳು ಪರಿಶ್ರಮಗಳಿಂದ ಯಶಸ್ಸು ಕಾಣಲು ಸಾಧ್ಯವಿದೆ. ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಉನ್ನತ ಸಾಧನೆಯೊಂದಿಗೆ ಗುರುತಿಸಿಕೊಳ್ಳಬೇಕು ಎಂದು ವಂಡಾರು ಶ್ರೀಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಗಳ ಆಡಳಿತ ನರ‍್ದೇಶಕ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಉದ್ಯಮಿ ಸಂಪತ್‌ಕುಮಾರ್ ಶೆಟ್ಟಿ ಹೇಳಿದರು.

ಅವರು ವಂಡಾರು ದಿನಬಂಧು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದ್ಯ ಪ್ರದೇಶದ ಇಂದೂರ್‌ನಲ್ಲಿ ಇತ್ತೀಚೆಗೆ ನಡೆದ ನ್ಯಾಶನಲ್ ಲೆವೆಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ವಿಜೇತ ವಂಡಾರು ಕೆಳಮನೆ ದೀಪಾ ಆನಂದ ಶೆಟ್ಟಿ ಪುತ್ರ ಧನುಷ್ ಇವರಿಗೆ ಹಮ್ಮಿಕೊಂಡ ಹೂಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಸನ್ಮಾನಿಸಿ ಮಾತನಾಡಿದರು.

ವಂಡಾರು ದಿನಬಂಧು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಪ್ರವೀಣ ಹೆಗ್ಡೆ ವಂಡಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಂಡಾರು ಎಂಬ ಕುಗ್ರಾಮದ ವಿದ್ಯಾರ್ಥಿ ಧನುಷ್ ನ್ಯಾಶನಲ್ ಲೆವೆಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ವಿಜೇತನಾಗಿ ಮುಂದೆ ಅಂತಾರಾಷ್ಟಿçÃಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಊರಿಗೆ ಹಾಗೂ ಎಲ್ಲರಿಗೂ ಹೆಮ್ಮೆಯನ್ನು ತಂದಿದೆ. ಪ್ರತಿಭೆಯ ಮುಂದಿನ ಸಾಧನೆಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು. ನಿವೃತ್ತ ಶಿಕ್ಷಕ ವಿಶ್ವನಾಥ ಶೆಟ್ಟಿ ವಂಡಾರು, ದೀಪಾ ಆನಂದ ಶೆಟ್ಟಿ,ಊರ ಅಭಿಮಾನಿಗಳು,ಪ್ರಮುಖರು ಉಪಸ್ಥಿತರಿದ್ದರು.

ನ್ಯಾಶನಲ್ ಲೆವೆಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥÀಮ ಸ್ಥಾನದೊಂದಿಗೆ ಚಿನ್ನದ ಪದಕ ವಿಜೇತ ಧನುಷ್ ತನ್ನ ಅನುಭವ ಹಾಗೂ ಸಾಧನೆಗಳನ್ನು ಅನಿಸಿಕೆ ವ್ಯಕ್ತ ಪಡಿಸಿದರು. ಶಿಕ್ಷಕಿ ಶಾರದ ಸ್ವಾಗತಿಸಿದರು.ನಿವೃತ್ತ ಶಿಕ್ಷಕ ಸಂತೋಷಕುಮಾರ್ ಶೆಟ್ಟಿ ವಂಡಾರು ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ಶಿಕ್ಷಕಿ ಪ್ರೇಮಾವತಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments