Tuesday, August 11, 2026
Homeಕಾರ್ಕಳರೆಂಜಾಳ ಭೂಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಿ: ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್...

ರೆಂಜಾಳ ಭೂಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಿ: ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಆಗ್ರಹ.

ಕಾರ್ಕಳ ತಾಲ್ಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ಯಾರಲ್ ಬೆಟ್ಟುವಿನ ಹೆಡ್ಮೇ ಎಂಬಲ್ಲಿ ಸುಮಾರು 15 ದಲಿತರ ಮನೆಗಳಿರುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು ಸುಮಾರು 4 ದಲಿತ ಮನೆಯವರನ್ನು ಸ್ಥಳಾಂತರ ಮಾಡಿದ್ದು ಅಪಾಯದ ಅಂಚಿನಲ್ಲಿವೆ.

ವಿಷಯ ತಿಳಿದ ಕೂಡಲೇ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯ ಒಂದು ನಿಯೋಗ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್ ನೇತ್ರತ್ವದಲ್ಲಿ ಭೇಟಿಕೊಟ್ಟು ಪರಿಸ್ಥಿತಿಯ ಅವಲೋಕನ ನಡೆಸಿತು. ಇತ್ತಿಚೇಗೆ ಸುರಿದ ಭಾರಿ ಮಳೆಗೆ ದಲಿತರ ಮನೆಗಳಿರುವ ಪ್ರದೇದಲ್ಲಿ ಭಾರಿ ಗುಡ್ಡ ಬಿರುಕು ಬಿಟ್ಟು , ಗುಡ್ಡ ಕುಸಿದು ಹರಿಪ್ರಸಾದ್ ಎನ್ನುವವರ ಮನೆಯ ಸಮೀಪದ ವರೆಗೂ ಮಣ್ಣು ಕೊಚ್ಚಿಕೊಂಡು ಬಂದಿದು ಭಾರೀ ಅಪಾಯದ ಅಂಚಿನಲ್ಲಿದೆ. ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಜಿಲ್ಲಾಡಳಿತ ತುರ್ತು ರಕ್ಷಣಾ ಕಾರ್ಯವನ್ನು ಆರಂಬಿಸಿ ಕೇರಳದ ವಯನಾಡಿನಲ್ಲಿ ಆದಂತಹ ದುರಂತ ಸಂಭವಿಸದಂತೆ ಮುಂದಾಗುವ ದೊಡ್ಡ ಅನಾಹುತವನ್ನು ತಡೆಗಟ್ಟಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಆಗ್ರಹಿಸುತ್ತದೆ.

ಸೋಮವಾರ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ನಿಯೋಗದಲ್ಲಿ ದ. ಸಂ. ಸ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಸಂಘಟನಾ ಸಂಚಾಲಕರಾದ ಅಣ್ಣಪ್ಪ ನಕ್ರೆ , ತಾಲೂಕು ಪದಾಧಿಕಾರಿಗಳಾದ ರಾಘವ ಕುಕುಜೆ , ರಮೇಶ ವೆರ್ವಾಜೆ , ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments