ಪಡುಕುಡೂರು : ಪಡುಕುಡೂರಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪಡುಕುಡೂರು ಕಂಬಳಮನೆ ಸುಧಾಕರ ಶೆಟ್ಟಿ ಮಾಲಾರ್ಪಣೆ ಮಾಡಿದರು.
ಪ್ರಮುಖರಾದ ಪಡುಕುಡೂರು ಪಡುಪರ್ಕಳ ಶಂಕರ ಶೆಟ್ಟಿ, ಹರೀಶ್ ಶೆಟ್ಟಿ ಪಡುಪರ್ಕಳ, ಜಗದೀಶ ಹೆಗ್ಡೆ, ಶಂಕರ ಶೆಟ್ಟಿ ಮುನಿಯಾಲು,ಅಶೋಕ್ ಎಂ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಸಂಚಾಲಕ ಪ್ರಸನ್ನ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ, ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಅಧ್ಯಕ್ಷ ಸಂದೀಪ್ ಶೆಟ್ಟಿ, ಶಿಕ್ಷಕರು, ವಿವಿಧ ಸಂಸ್ಥೆಗಳ ಪ್ರಮುಖರು,ಶಾಲಾಭಿವೃದ್ಧಿ ಸಮಿತಿ, ಶತಮಾನೋತ್ಸವ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.



