Wednesday, August 19, 2026
Homeಕಾರ್ಕಳಕಾರ್ಕಳ ಎನ್ ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ನಲ್ಲಿ ಸಂಭ್ರಮದ 80ನೇ ಸ್ವಾಂತಂತ್ರ ದಿನಾಚರಣೆ

ಕಾರ್ಕಳ ಎನ್ ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ನಲ್ಲಿ ಸಂಭ್ರಮದ 80ನೇ ಸ್ವಾಂತಂತ್ರ ದಿನಾಚರಣೆ

ಕಾರ್ಕಳ ಎನ್ ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರನಲ್ಲಿ ಸಂಭ್ರಮದ 80ನೇ ಸ್ವಾಂತಂತ್ರ ದಿನಾಚರಣೆ ನಡೆಯಿತು. ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಅಧ್ಯಕ್ಷ ಡಾ. ರಿಜ್ವಾನ್ ಅಹಮದ್ ಕಾರ್ಕಳ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಾರ್ಕಳ ಎನ್ ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫಿರು ಸಾಹೇಬ್ ಉಡುಪಿ ,ನಮ್ಮ ನಾಡ ಒಕ್ಕೂಟದ ಸೆಂಟ್ರಲ್ ಕಮಿಟಿ ಸದಸ್ಯರಾದ ಮೊಹಮ್ಮದ್ ಹೊಸೇನ್ ಕಾರ್ಕಳ , ಎನ್ ಎಸ್ ಅಕಾಡೆಮಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋಹ್ಸಿನ್ ಕಾರ್ಕಳ ,ನಮ್ಮ ನಾಡ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಹಾರೂನ್ ರಶೀದ್ ,ಎನ್ ಎನ್ ಓ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಮುಸ್ತಾಫಾ , ಕಾರ್ಕಳ ತಾಲೂಕು ಮಾಜಿ ಅಧ್ಯಕ್ಷ ಶಾಕಿರ್ ಶೀಶ್,ಸ್ಥಳೀಯರಾದ ಇಮ್ರಾನ್, ಅಝೀಝ್ ಉಪಸ್ತಿತರಿದ್ದರು. ಮೌಲಾನಾ ರಹೀಮ್ ಕಿರಾತ್ ಪಠಿಸಿದರು,ಸ್ಪರ್ಧಕಾಂಕ್ಷಿಗಳು ರಾಷ್ಟ್ರಗೀತೆ ಹಾಡಿದರು.

ಎನ್.ಎಸ್ ಅಕಾಡೆಮಿ ಕಾರ್ಯಕಾರಿ ಸದಸ್ಯ ಅಬ್ದುಲ್ ಶುಕುರ್ ಬೆಳ್ವೆ ಸ್ವಾಗತಿಸಿದರು. ಎನ್.ಎಸ್ ಅಕಾಡೆಮಿ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ವಂದಿಸಿದರು. ಅಹ್ಲೀ ರಸೂಲ್ ಕಾರ್ಯಕ್ರಮ ನಿರೂಪಿಸಿದರು .

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments