ಎಳ್ಳಾರೆ ಅಭಿವೃದ್ಧಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮಹಿಳಾ ಚಂಡೆ ಬಳಗ ತರಬೇತಿ ಉದ್ಘಾಟನಾ ಕಾರ್ಯಕ್ರಮ
ಎಳ್ಳಾರೆ ( ಕಡ್ತಲ ) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಹೆಬ್ರಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಎಳ್ಳಾರೆ ಅಭಿವೃದ್ಧಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮಹಿಳಾ ಚಂಡೆ ಬಳಗ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಯಿತು.
ಕಡ್ತಲ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಸುಕೇಶ್ ಹೆಗ್ಡೆ ಉದ್ಘಾಟಿಸಿ ಧರ್ಮಸ್ಥಳ ಯೋಜನೆಯಿಂದ ಹಲವಾರು ಜನಪರ ಕಾರ್ಯಕ್ರಮಗಳು ನಡೆಯುತ್ತಿದ್ದು ಮಹಿಳೆಯರಿಗೆ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಜ್ಞಾನವಿಕಾಸ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿಯಾಗಿದೆ.
ಸೃಜನಶೀಲ ಕಾರ್ಯಕ್ರಮದಲ್ಲಿ ಮಹಿಳಾ ಚಂಡೆ ಟೀಮ್ ಆಯ್ಕೆ ಮಾಡಿರುವುದು ತುಂಬಾ ಸಂತಸದ ವಿಷಯ.ಎಳ್ಳಾರೆಯ ಮಹಿಳಾ ತಂಡ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಹಬ್ರಿ ತಾಲೂಕಿನ ಯೋಜನಾಧಿಕಾರಿ ರೇಷ್ಮಾ ಮಾತನಾಡಿ ಮಹಿಳೆಯರು ಅಬಲೆಯರಲ್ಲ ಸಬಲೆಯರು , ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಇದೊಂದು ಅತ್ಯುತ್ತಮ ಅವಕಾಶ ನೀಡಿದೆ. ಮಹಿಳಾ ಚಂಡೆ ಬಳಗ ಎಲ್ಲರಿಗೂ ಆಕರ್ಷಣೀಯ ಚಂಡೆ ಬಳಗವಾಗಲಿ ಎಂದು ಹಾರೈಸಿದರು.
ಜನಜಾಗೃತಿ ಸದಸ್ಯರಾದ ದೇವೇಂದ್ರ ಕಾಮತ್, ಚಂಡೆ ಗುರು ಭಾನು ದಾಸ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಾವತಿ, ಮುದ್ರಾಡಿ ಮೇಲ್ವಿಚಾರಕಿ ಶೋಭಾ, ಸೇವಾ ಪ್ರತಿನಿಧಿ ಹೇಮಾ ಉಪಸ್ಥಿತರಿದ್ದರು




