ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮುದ್ರಾಡಿಯಲ್ಲಿ ಯಂತ್ರಶ್ರೀ ಹದನ ಕಾರ್ಯಕ್ರಮ.
ಮುದ್ರಾಡಿ : ಭಾರತದ ಭವಿಷ್ಯದ ರೈತರನ್ನು ಗೌರವಿಸಿದಾಗ ಮಾತ್ರ ಭತ್ತದ ಕೃಷಿಯನ್ನು ಉಳಿಸಲು ಸಾಧ್ಯ ಎಂದು ಹಿರಿಯರಾದ ಶಿವಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುರ್ಸಾಲು ಮೋಹನ ದಾಸ್ ನಾಯಕ್ ಹೇಳಿದರು.
ಅವರು ಹೆಬ್ರಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮುದ್ರಾಡಿಯಲ್ಲಿ ನಡೆದ ಯಂತ್ರಶ್ರೀ ಹದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭತ್ತದ ಬೇಸಾಯ, ನಾಡಿಯ ಕೊನೆಯ ದಿನದಂದು ಕಡೆಯ ನಾಟಿಯ ಊಟ ಎಂದು ಪೂರ್ವಿಕರು ಮಾಡುತ್ತಿದ್ದರು, ಅದು ಇಂದು ನೇಪತ್ಯಕ್ಕೆ ಸರಿಯುತ್ತಿದೆ. ಭತ್ತದ ಬೇಸಾಯದ ಜೊತೆಗೆ ಪುರಾತನ ಕೃಷಿ ಪದ್ಧತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕೆಂದು ಮೋಹನದಾಸ ನಾಯಕ್ ಹೇಳಿದರು.
ಯಂತ್ರಶ್ರೀ ಸಾಧಕ ರೈತ ರಮೇಶ್ ನಾಯಕ್ ಮತ್ತು ವಾಸು ಕುಲಾಲ್ ಕುಂದಾರು, ಮೂಲ ಪ್ರಗತಿಪರ ಕೃಷಿಕರಾದ ಮೂಕಾಂಬಿಕಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
350ಕ್ಕೂ ಎಕರೆ ಮೇಲ್ಪಟ್ಟು ಕೈಯಲ್ಲಿ ನಾಟಿ ಮಾಡಿದ ಶಕುಂತಲಾ ಮತ್ತು ತಂಡದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದಿನ ಪದ್ಧತಿಯ ಕೃಷಿಯ ಅನಾವರಣಗೊಳಿಸಲಾಯಿತು. ಹಳೆಯ ಶೈಲಿಯ 51ಕ್ಕೂ ಮೇಲ್ಪಟ್ಟು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸವಿದರು.
ನೆಲದಲ್ಲಿ ಕುಳಿತು ಊಟ ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಜನಜಾಗ್ರತಿಯ ವೇದಿಕೆಯ ಅಧ್ಯಕ್ಷ ರತ್ನಾಕರ ಪೂಜಾರಿ, ಹಿರಿಯರಾದ ಗಣಪತಿ ಎಂ, ವರಂಗ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶುಭದರ್ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಭಾಷ್ ಎಂ, ಯೋಜನಾಧಿಕಾರಿಗಳಾದ ಬಾಲಕೃಷ್ಣ ಎಂ, ಗಿರೀಶ್, ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ, ಜನಜಾಗ್ರತಿಯ ವೇದಿಕೆಯ ವಿಠ್ಠಲ ಶೆಟ್ಟಿ, ಉದಯ್,ಶಾಲಿನಿ ಭಂಡಾರಿ, ವಲಯ ಅಧ್ಯಕ್ಷ ಯೋಗೀಶ್, ಕೇಂದ್ರ ಸಮಿತಿಯ ಪ್ರವೀಣ್ ಹೆಗ್ಡೆ, ಪ್ರಗತಿಪರ ಕೃಷಿಕರು, ರೈತ ಮಹಿಳೆಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಯವರು, ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.
ಚೆನ್ನಮಣಿ ಆಡಿ ತೆಂಗಿನ ಸಿರಿಯನ್ನು ಅರಳಿಸಿ ಉದ್ಘಾಟಿಸಲಾಯಿತು. ಕೃಷಿ ಅಧಿಕಾರಿ ಉಮೇಶ್ ನಿರೂಪಿಸಿದರು.





